ಬೆಂಗಳೂರು:ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ನಾಲ್ವರನ್ನು ಬೆಂಗಳೂರಿನ ಸಂಜಯನಗರದ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ದೆಹಲಿ ಮೂಲದ ರಜತ್, ಶಿವ್ ರಾಣಾ, ದೇವ್ ಸರೋಯಿ, ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು. ಇವರು ಮಾ. 24ರಂದು ಗ್ಯಾಂಗ್​ ರೇಪ್ ಮಾಡಿದ್ದರು.
ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ ಗ್ಯಾಂಗ್​ರೇಪ್ ಸಂತ್ರಸ್ತೆ. ಈಕೆಯನ್ನು ಆರೋಪಿ ರಜತ್ ಮಾ. 24ರಂದು ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿದ್ದ. ಬಳಿಕ ತಡರಾತ್ರಿ ಆದ ಕಾರಣ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ರೂಮ್​ಗೆ ಕರೆದೊಯ್ದಿದ್ದ.
ರೂಮ್​ಗೆ ಕರೆದೊಯ್ದ ಬಳಿಕ ಅಲ್ಲಿ ನಾಲ್ವರು ಯುವತಿಗೆ ಬೆದರಿಸಿ ಸರಣಿ ಅತ್ಯಾಚಾರ ನಡೆಸಿದ್ದು, ಈ ಕುರಿತು ಸಂತ್ರಸ್ತೆ ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಗಳು ರಾಷ್ಟ್ರಮಟ್ಟದ ಈಜುಪಟುಗಳಾಗಿದ್ದು, ಅಭ್ಯಾಸಕ್ಕೆಂದು ಬೆಂಗಳೂರಿಗೆ ಬಂದು ವಾಸವಿದ್ದರು.
ಪಕ್ಕದ್ಮನೆ ಮಗುವನ್ನು ಕೊಲೆ ಮಾಡಿದ್ದವ ತನ್ನ ತಾನೇ ಕೊಂದುಕೊಂಡ; ಜೈಲಲ್ಲೇ ಆತ್ಮಹತ್ಯೆ..

ಜನ್ಮದಿನದಂದೇ ಮರಣ: ಬೈಕ್​ನಲ್ಲಿ ಹೋಗುವಾಗ ತಲೆ ಮೇಲೇ ಬಿದ್ದ ಮರ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
