ಉತ್ತರಪ್ರದೇಶ:ತಾಯಿಯೊಬ್ಬಳು ತನ್ನ ಹಿರಿಮಗನನ್ನು ಕಿರಿಯ ಮಗ ಹಾಗೂ ಇನ್ನೊಬ್ಬನ ಸಹಾಯದಿಂದ ಕೊಲೆ ಮಾಡಿದ ಪ್ರಕರಣವೊಂದು ನಡೆದಿದ್ದು, ಪೊಲೀಸರು ತಾಯಿ-ಮಗ ಇಬ್ಬರನ್ನೂ ಬಂಧಿಸಿದ್ದಾರೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.
ತಾಯಿ ಕೃಷ್ಣಾದೇವಿ, ಮಗ ಅಭಿಷೇಕ ಬಂಧಿತ ಆರೋಪಿಗಳು. ಕೃಷ್ಣಾದೇವಿಯ ಸೊಸೆ ಅಂಜಲಿ ಎಂಬಾಕೆಯ ದೂರಿನ ಮೇರೆಗೆ ಉತ್ತರಪ್ರದೇಶದ ಮೋದಿ ನಗರದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅನುಜ್​ ಕುಮಾರ್ ಅಲಿಯಾಸ್​ ಸಮರ್ (27) ಕೊಲೆಗೀಡಾದ ಪುತ್ರ.
ತನ್ನ ಪತಿ ಅನುಜ್​ ಜುಲೈ 18ರಿಂದ ಕಾಣೆಯಾಗಿದ್ದಾರೆ ಎಂದು ಅಂಜಲಿ ಜು. 21ರಂದು ಪೊಲೀಸರಿಗೆ ದೂರು ನೀಡಿದ್ದರು. ಆಗಸ್ಟ್​ 3ರಂದು ಅನುಜ್​ ಶವ ಮಂದಿರವೊಂದರ ಹಿಂಭಾಗದಲ್ಲಿ ಕಂಡಿರುವುದಾಗಿ ಅಂಜಲಿಯ ಸಹೋದರ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಈ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ತಮ್ಮ ಹಾಗೂ ತಾಯಿಯೇ ಕೊಲೆಗಾರರು ಎಂಬುದು ಗೊತ್ತಾಗಿದೆ. ಆ ಬಳಿಕ ಅಂಜಲಿ ತನ್ನ ಸೊಸೆ, ಗಂಡನ ತಮ್ಮನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ ದೇವೇಂದ್ರ ಎಂಬ ಇನ್ನೊಬ್ಬನ ಹೆಸರನ್ನೂ ಉಲ್ಲೇಖಿಸಿದ್ದಳು. ಅದರನ್ವಯ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.
ನಂತರ ಪೊಲೀಸರು ಕೃಷ್ಣಾದೇವಿ, ಅಭಿಷೇಕ್​ರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಿವರ ಬಹಿರಂಗಗೊಂಡಿದೆ. ದೇವೇಂದ್ರ ಎಂಬಾತನ ಜತೆ ಅನೈತಿಕ ಸಂಬಂಧ ಇದ್ದ ಬಗ್ಗೆ ಕೃಷ್ಣಾದೇವಿ ಬಾಯ್ಬಿಟ್ಟಿದ್ದಳು. ಈ ವಿಷಯ ಗೊತ್ತಾಗಿ ಹಿರಿಯ ಮಗ ಅನುಜ್​ ಆಕ್ಷೇಪ ವ್ಯಕ್ತಪಡಿಸಿದ್ದ. ಆದರೆ ಪ್ರಿಯಕರನನ್ನು ಬಿಟ್ಟು ಬದುಕಲಾಗದ ಕೃಷ್ಣಾದೇವಿ, ತನ್ನ ಮಗ ಹಾಗೂ ಪ್ರಿಯಕರನ ಜತೆ ಸೇರಿ ಅನುಜ್​ನನ್ನು ಉಸಿರುಗಟ್ಟಿಸಿ ಸಾಯಿಸಿ ದೇಗುಲವೊಂದರ ಹಿಂಭಾಗ ಶವ ಎಸೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಾದೇವಿ ಮತ್ತು ಅಭಿಷೇಕ್​ನನ್ನು ಪೊಲೀಸರು ಶುಕ್ರವಾರ ರಾಜ್​ ಟಾಕೀಸ್ ಬಳಿ ಪತ್ತೆ ಹಚ್ಚಿ ಬಂಧಿಸಿದ್ದು, ಅವರನ್ನು ಜೈಲಿಗೆ ಕಳಿಸಿದ್ದಾರೆ. ದೇವೇಂದ್ರನ ಪತ್ತೆಗೆ ಬಲೆ ಬೀಸಿದ್ದು, ಹುಡುಕಾಟ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರುವ ದೇವೇಂದ್ರನನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ.
ನಿಮ್ಮೂರಿಗೀಗ ಅವರಲ್ಲ, ಇವರೇ ಇನ್​ಸ್ಪೆಕ್ಟರ್​; 13 ಡಿವೈಎಸ್​ಪಿಗಳೂ ಟ್ರಾನ್ಸ್​ಫರ್​..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
