ಮುಂಬೈ: ಈತ ತನ್ನ ಅರ್ಧ ಆಯಸ್ಸು ತಲೆಮರೆಸಿಕೊಂಡೇ ಕಳೆದಿದ್ದ ಎಂದರೂ ತಪ್ಪಾಗಲಾರದು. ಏಕೆಂದರೆ ಐದು ಕೊಲೆಗಳನ್ನು ಮಾಡಿದ್ದ ಈತ ಅದಾಗಿ 28 ವರ್ಷಗಳ ಬಳಿಕ, ಅಂದರೆ ಈಗ ತನ್ನ 48ನೇ ವಯಸ್ಸಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳ ಹುಡುಕಾಟದಲ್ಲಿದ್ದಾರೆ.
ರಾಜ್​ಕುಮಾರ್ ಅಮರ್​ನಾಥ್ ಚೌಹಾಣ್ ಅಲಿಯಾಸ್ ಕಾಲಿಯ ಬಂಧಿಸಲ್ಪಟ್ಟಿರುವ ಆರೋಪಿ. 2007ರಿಂದ ಕತಾರ್​ನಲ್ಲಿ ನೆಲೆಸಿದ್ದ ಈತ ಗುರುವಾರ ಭಾರತಕ್ಕೆ ಮರಳಿದ್ದಾಗ ಸಿಕ್ಕಿಹಾಕಿಕೊಂಡಿದ್ದಾನೆ. ವಲಸೆ ವಿಭಾಗದ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ 1994ರ ನ. 16ರಂದು ಜಾಗ್ರಾಣಿ ದೇವಿ ಪ್ರಜಾಪತಿ ( ಹಾಗೂ ಆಕೆಯ ಮಕ್ಕಳಾದ ಪ್ರಮೋದ್ (5), ಪಿಂಕಿ (3), ಚಿಂಟು (2) ಮತ್ತು ಮೂರು ತಿಂಗಳ ಮಗು ಪಿಂಟುವನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಮೀರಾ ಭಯಾಂಡರ್ ವಸಾಯಿ ವಿರಾರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಈತನಿಗೆ ಅನಿಲ್​ ಸರೋಜ್ ಮತ ಸುನಿಲ್ ಸರೋಜ್ ಅವರು ಸಹಕರಿಸಿದ್ದು, ಪೊಲೀಸರು ಇವರ ಶೋಧದಲ್ಲಿದ್ದಾರೆ.
ಕೊಲೆಯಾದ ಎಲ್ಲರೂ ಹಾಗೂ ಆರೋಪಿಗಳು ಮೀರಾ ರೋಡ್​ನ ಪೆಂಕರ್ಪಡದ ಭಾರ್ವಾಡ್ ಚಾವ್ಲ್​ನಲ್ಲಿ ನೆಲೆಸಿದ್ದರು. 1994ರ ನ. 15ರಂದು ಜಾಗ್ರಾಣಿ ದೇವಿ ಹಾಗೂ ಆಕೆಯ ಮಗಳು ಪಿಂಕಿ ಅನಿಲ್​ನ ಸೂಟ್​​ಕೇಸ್​ನ ಹ್ಯಾಂಡಲ್ ಮುರಿದು ಹಾಕಿದ್ದರು. ಈ ಬಗ್ಗೆ ನ. 16ರ ಬೆಳಗ್ಗೆ ಆಕೆಯನ್ನು ವಿಚಾರಿಸಲು ಹೋಗಿದ್ದಾಗ ಅನಿಲ್ ಆಕೆಯ ಮೇಲೆ ಕೈಮಾಡಿದ್ದು, ಇದು ದೊಡ್ಡ ಗಲಾಟೆಗೆ ಕಾರಣವಾಗಿತ್ತು. ನಂತರ ನಾನು ಅನಿಲ್, ಸುನಿಲ್ ಮೂವರೂ ಆಕೆ ಇದ್ದಲ್ಲಿಗೆ ಹರಿತವಾದ ಆಯುಧದೊಂದಿಗೆ ತೆರಳಿ ಇರಿದು, ಕೊಚ್ಚಿ ಕೊಲೆ ಮಾಡಿದ್ದಾಗಿ ಚೌಹಾಣ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಕೊಲೆ ಬಳಿಕ ಆರೋಪಿಗಳು ಬಾಗಿಲು ಹಾಕಿ ಪರಾರಿಯಾಗಿದ್ದರು. ಜಾಗ್ರಾಣಿಯ ಪತಿ ರಾಜ್​ನಾರಾಯಣ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಅನಿಲ್-ಸುನಿಲ್ ಉತ್ತರಪ್ರದೇಶ ಮೂಲದ ಕಸಿನ್ಸ್​ಗಳಾಗಿದ್ದು, ಚೌಹಾಣ್​ ಬನಾರಸ್​ನಿಂದ ಬಂದಿದ್ದವನಾಗಿದ್ದ. ಸೂಟ್​ಕೇಸ್ ಮುರಿದು ಹಾಕಿದ್ದ ಬಗ್ಗೆ ರಾಜ್​ನಾರಾಯಣ್​ಗೆ ವಿಷಯ ಗೊತ್ತಾಗಿದ್ದು, ಆತ ಜಗಳ ಮಾಡದಂತೆ ಮನವಿ ಮಾಡಿಕೊಂಡಿದ್ದ ಮತ್ತು ಹೊಸ ಸೂಟ್​ಕೇಸ್ ತೆಗೆಸಿಕೊಡುವ ಭರವಸೆ ಕೂಡ ಕೊಟ್ಟಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ನಂತರ ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ಪತ್ತೆ ಆಗಿರಲಿಲ್ಲ. ಈ ಮಧ್ಯೆ 2007ರಲ್ಲೇ ರಾಜ್​​ನಾರಾಯಣ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಎಂಬಿವಿವಿ ಪೊಲೀಸರು ಪತ್ತೆ ಆಗದೆ ಉಳಿದಿರುವ ಹಳೇ ಕೇಸ್​ಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾಗ 2020ರಲ್ಲಿ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತ್ತು. ಅಲ್ಲಿಂದ ಮತ್ತೆ ಆರೋಪಿಗಳ ಪತ್ತೆ ಕಾರ್ಯ ಆರಂಭವಾಗಿದ್ದು, ಅದರ ಅಂಗವಾಗಿ ಗುರುವಾರ ಒಬ್ಬ ಸಿಕ್ಕಿಬಿದ್ದಿದ್ದಾನೆ. –ಏಜೆನ್ಸೀಸ್
ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

ಅರೆಬೆತ್ತಲೆಯಾಗಿ ಎರಡನೇ ಮಹಡಿಗೆ ಹತ್ತಿ ಒಂಟಿ ಮಹಿಳೆ ಇದ್ದ ಮನೆ ಬಾಗಿಲು ಬಡಿದ; ಇಡೀ ಕಟ್ಟಡದಲ್ಲಿ ಯಾರೂ ಇಲ್ಲದಾಗ ಅವಾಂತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
