ಮುಂಬೈ:ಉತ್ತಮ ಆದಾಯ ನೀಡುವ ನೆಪದಲ್ಲಿ 147 ವ್ಯಕ್ತಿಗಳಿಂದ 17.94 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಜಿವಿಆರ್ ರಫ್ತು ಮತ್ತು ಆಮದು ಕಂಪನಿಯ ಮಾಲೀಕನನ್ನು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಬಂಧಿಸಿದೆ.
ಚೆನ್ನೈ ಮೂಲದ ವೆಂಕಟರಮಣನ್ ಗೋಪಾಲನ್ (56) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:‘ಅವರಿಗೇನಾದರೂ ಆದ್ರೆ ನೀನೇ ಹೊಣೆ’.. ಸಮಂತಾಗೆ ಎಚ್ಚರಿಸಿದ್ದೇಕೆ ನಟಿಯರು?
ಕಳೆದ ವರ್ಷ ಜುಲೈನಲ್ಲಿ 1 ಕೋಟಿ ವಂಚನೆ ಸಂಬಂಧ ಮಹಿಳೆಯೊಬ್ಬರು ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಕೋಟ್ಯಂತರ ರೂ. ವಂಚನೆ ವಿಷಯ ಬೆಳಕಿಗೆ ಬಂದಿತ್ತು.
ವರ್ಷದಿಂದ ತಲೆಮರೆಸಿಕೊಂಡಿದ್ದ ಈತ ಆಗಾಗ್ಗೆ ಸ್ಥಳ ಬದಲಾಯಿಸುತ್ತಿದ್ದ. ಹೀಗಾಗಿ ಈತನ ಬಂಧನ ಪೊಲೀಸರಿಗೆ ಸವಾಲಾಗಿತ್ತು. ಕಡೆಗೆ ಚೆನ್ನೈನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆಪಾದಿತ ಮತ್ತು ಇತರರು ವಕೋಲಾ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ತೆರೆದು ಸ್ಥಿರ ಠೇವಣಿಗಳ ಮೇಲೆ ಶೇ.7-10 ಆಫರ್ ನೀಡಿ 147 ವ್ಯಕ್ತಿಗಳಿಗೆ ಆಮಿಷವೊಡ್ಡಿದ್ದರು. ಆದರೆ ಕಡೆಗೆ ಸಂತ್ರಸ್ತರಿಗೆ ಅಸಲು ಮೊತ್ತ ಅಥವಾ ಬಡ್ಡಿ ಸಿಗುವುದಿಲ್ಲ. ಕಡೆಗೆ ಆರೋಪಿಗಳು ವಂಚಿಸಿ ತಲೆಮರೆಸಿಕೊಂಡಿ್ದದರು.
ಗೋಪಾಲನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಜುಲೈ 11 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಪಾಲನ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಆತನಿಗೆ ಎರಡು ಅಥವಾ ಮೂರು ಮನೆಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
