ಮುಂಬೈ:ಮದುವೆ ಮಂಟಪಕ್ಕೆ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ವಧುವಿನ ಜತೆ ವರ ಎಸ್ಕೇಪ್​ ಆಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಂದಹಾಗೆ ಈ ವರದಿಯಲ್ಲಿ ಬರುವ ವಧು-ವರ ಅಪರಾಧವೇನು ಮಾಡಿಲ್ಲ. ಅವರಿಬ್ಬರ ಆ ನಿರ್ಧಾರಕ್ಕೆ ಕರೊನಾ ಕಾರಣವಾಗಿದೆ. ಅದು ಹೇಗೆಂದು ತಿಳಿಯಲು ಮುಂದೆ ಓದಿ…
ದೇಶದಲ್ಲಿ ಎರಡನೇ ಕರೊನಾ ಅಲೆ ದಿನೇದಿನೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಕರೊನಾ ಹಾಟ್​ಸ್ಪಾಟ್​ ಆಗಿದೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕರೊನಾ ಮತ್ತೊಮ್ಮೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹೆಮ್ಮಾರಿಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದೆ. ಲಾಕ್​ಡೌನ್​ ಸಹ ಘೋಷಣೆಯಾಗಿದೆ. ಮಹಾರಾಷ್ಟ್ರಾದ್ಯಂತ ರಾತ್ರಿ ಕರ್ಫ್ಯೂ ಸಹ ಜಾರಿಯಾಗಿದೆ. ಮದುವೆ-ಸಮಾರಂಭಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಇದರ ನಡುವೆ ನಾಶಿಕ್​ನಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ಬಂತು.
ಮಹಾರಾಷ್ಟ್ರ ಸರ್ಕಾರ ನೀಡಿರುವ ಮಾರ್ಗಸೂಚಿಯ ಪ್ರಕಾರ ಗರಿಷ್ಠ 50 ಮಂದಿ ಮಾತ್ರ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಅಲ್ಲದೆ, ಎಲ್ಲರೂ ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಆದರೆ, ನಾಶಿಕ್​ ಮದುವೆಯಲ್ಲಿ ಇದ್ಯಾವುದನ್ನು ಅನುಸರಿಸುತ್ತಿರಲಿಲ್ಲ. ಹೀಗಾಗಿ ಮದುವೆ ನಡೆಯುತ್ತಿದ್ದ ಹೋಟೆಲ್​ಗೆ ಕ್ರಮ ಜರುಗಿಸಲು ಪೊಲೀಸರು ಆಗಮಿಸಿದರು.
ಇದನ್ನೂ ಓದಿರಿ:ಗೂಗಲ್‌ ಸರ್ಚ್‌ ಮಾಡುವಾಗ ಬಯಲಾಯ್ತು ಹೆಂಡತಿ ಅಕ್ರಮ ಸಂಬಂಧ! ಬಯಲು ಶೌಚಕ್ಕೆ ಹೋದವನೂ ಸೆರೆಸಿಕ್ಕ…
ಇತ್ತ ಪೊಲೀಸರು ಬರುತ್ತಿದ್ದಾರೆ ಎಂಬ ವಿಚಾರ ತಿಳಿದ ಮದುವೆ ಮನೆಯವರು ಹೇಗಾದರೂ ಇದರಿಂದ ತಪ್ಪಿಸಿಕೊಳ್ಳಬೇಕೆಂದು ಉಪಾಯ ಮಾಡಿ, ಅದರಂತೆಯೇ ಎಲ್ಲರೂ ಅಲ್ಲಿಂದ ಪರಾರಿಯಾದರು. ವಧು-ವರ ತಮ್ಮ ಕುಟುಂಬದವರೊಂದಿಗೆ ಸೇರಿ ಹೋಟೆಲ್​ ಬಿಟ್ಟು ಬೀದಿಗೆ ಬಂದರು. ಅದರಲ್ಲೂ ವಧು-ವರ ಸ್ಥಳದಿಂದಲೇ ಪರಾರಿಯಾದರು. ಕೆಲವು ಹತ್ತಿರದ ಎಟಿಎಂ ಒಳಗೆ ಅವಿತು ಕುಳಿತರು.
ಏನೇ ಮಾಡಿದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಕೊನೆಗೆ ವಧುವಿನ ತಂದೆಯನ್ನು ವಶಕ್ಕೆ ಪಡೆದ ಪೊಲೀಸರು ಹೋಟೆಲ್​ ಮಾಲೀಕ ಮತ್ತು ವಧುವಿನ ತಂದೆಯಿಂದ 5 ಸಾವಿರ ದಂಡ ಸಂಗ್ರಹಿಸಿದರು. ಅಲ್ಲದೆ, ಎಚ್ಚರಿಕೆ ನೀಡಿ ಸ್ಥಳದಿಂದ ಕಾಲ್ಕಿತ್ತರು.(ಏಜೆನ್ಸೀಸ್​)
VIDEO| ಚುನಾವಣಾ ಪ್ರಚಾರದ ಕೊನೆಯ ದಿನ ರಾಷ್ಟ್ರಗೀತೆಗಾಗಿ ವ್ಹೀಲ್​ಚೇರ್​ನಿಂದ ಎದ್ದು ನಿಂತ ದೀದಿ..!

ಹೊಸ ಇತಿಹಾಸ ಬರೆಯುವುದೇ ನಂದಿಗ್ರಾಮ?

ಬದಲಾದ ಜಪಾನ್ ಈಗ ಸಮರಕ್ಕೆ ಹಿಂಜರಿಯುತ್ತಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
