ಭುವನೇಶ್ವರ್​:ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಸಹಾಯಕ ಸಬ್​ ಇನ್ಸ್​ಪೆಕ್ಟರ್​ನನ್ನು ಗ್ರಾಮಸ್ಥರು ಅಟ್ಟಾಡಿಸಿ ಥಳಿಸಿರುವ ಘಟನೆ ಒಡಿಶಾದ ಸೋನೆಪುರ್​ ಜಿಲ್ಲೆಯ ತಿಲೈಮಾಲ್​ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಥಳಿತಕ್ಕೆ ಒಳಗಾದ ಎಎಸ್​ಐ ಅನ್ನು ಗೌರಾಹರಿ ಮೆಹೆರ್​ ಎಂದು ಗುರುತಿಸಲಾಗಿದೆ. ಇವರು ಸಬಾಲಯ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ ರತ್ನಾಕರ್​ ಪ್ರಧಾನ್​ ಮತ್ತು ಆತನ ಸಹೋದರ ಸುಬಾಸ್​ ಪ್ರಧಾನ್​ ನಡುವೆ ಗಲಾಟೆಯಾದ ಬಳಿಕ ಇಬ್ಬರು ಸುಬಾಲಯಾ ಪೊಲೀಸ್​ ಠಾಣೆಯ ಮೆಟ್ಟಿಲೇರಿದರು. ಸುಬಾಸ್​ ದೂರನ್ನು ಸ್ವೀಕರಿಸಿದ ಪೊಲೀಸರು ರತ್ನಾಕರ್​ ದೂರನ್ನು ನಿರಾಕರಿಸಿದರು. ಬಳಿಕ ಸುಬಾಸ್​ ದೂರಿನ ಮೇರೆಗೆ ಎಎಸ್​ಐ ಮೆಹೆರ್​​ ವಿಚಾರಣೆಗೆಂದು ಸಿವಿಲ್​ ಡ್ರೆಸ್​ನಲ್ಲಿ ಗ್ರಾಮಕ್ಕೆ ಬಂದರು. ಈ ವೇಳೆ ರತ್ನಾಕರ್​ ಪತ್ನಿಯ ಜತೆ ಅಸಭ್ಯವಾಗಿ ವರ್ತಿಸಿದರು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಪ್ರಿಯತಮೆ ಮೇಲಿನ ಸಿಟ್ಟಿಗೆ ರೈಲ್ವೆ ಸಿಗ್ನಲ್ ಬಾಕ್ಸ್​​ ಒಡೆದು ಹಾಕಿದ!
ಎಎಸ್​ಐ ವಿರುದ್ಧ ಕೆರಳಿದ ಗ್ರಾಮಸ್ಥರು ಅವರನ್ನು ಅಟ್ಟಾಡಿಸಿಕೊಂಡು ಥಳಿಸಿದ್ದಾರೆ. ಅಲ್ಲದೆ, ರತ್ನಾಕರ್​, ಎಎಸ್​ಐ ಮೆಹೆರ್​ ವಿರುದ್ಧ ಸೋನೆಪುರ್​ ಪೊಲೀಸ್​ ವರಿಷ್ಠಾಧಿಕಾರಿ ಮತ್ತು ಬಿರಾಮಹರಾಜ್​ಪುರ್​ ಉಪ ವಿಭಾಗೀಯ ಪೊಲೀಸ್​ ಅಧಿಕಾರಿಗೆ ದೂರು ಸಹ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರತ್ನಾಕರ್​, ಮರ ಕಡಿಯುವ ವಿಚಾರಕ್ಕೆ ನನ್ನ ಮತ್ತು ಸಹೋದರನ ನಡುವೆ ಜಗಳ ಆರಂಭವಾಯಿತು. ಬಳಿಕ ಸುಬಾಸ್​ ನನ್ನ ವಿರುದ್ಧ ದೂರು ದಾಖಲಿಸಿದ. ಆದರೆ, ನನ್ನ ದೂರುನ್ನು ನಿರಾಕರಿಸಿದರು. ಎಎಸ್​ಐ ವಿಚಾರಣೆಗೆಂದು ಗ್ರಾಮಕ್ಕೆ ಬಂದಾಗ ನಾನು ಇಲ್ಲದ ಸಮಯದಲ್ಲಿ ನನ್ನ ಪತ್ನಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಎಎಸ್​ಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಗ್ರಾಮದ 7 ಮಂದಿಯ ವಿರುದ್ಧ ಸಬಾಲಯ ಠಾಣಾ ಪೊಲೀಸರು ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

ಪ್ರಿಯತಮೆ ಮೇಲಿನ ಸಿಟ್ಟಿಗೆ ರೈಲ್ವೆ ಸಿಗ್ನಲ್ ಬಾಕ್ಸ್​​ ಒಡೆದು ಹಾಕಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + ten =
Remember me
