ಘಾಜಿಯಾಬಾದ್:ತಾವು ಕೇಳಿದ ಹಾಡನ್ನು ಹಾಕಲು ಹಿಂದೇಟು ಹಾಕಿದ ಪಬ್​​ ವಿರುದ್ಧ ಗಲಾಟೆ ನಡೆಸಿದ ಮೂವರು ಮಹಿಳೆಯರ ಮೇಲೆ ಪಬ್​​ ಬೌನ್ಸರ್‌ಗಳು ಹಲ್ಲೆ ನಡೆಸಿರುವ ಘಟನೆ ಘಜಿಯಾಬಾದ್​​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:N Ravikumar Hints About BJP-JDS Alliance | ಬಿಜೆಪಿ- ಜೆಡಿಎಸ್​​ ಮೈತ್ರಿ; ಸುಳಿವು ನೀಡಿದ ಎನ್​. ರವಿಕುಮಾರ್​
ಘಟನೆಯ ವಿವರ:ಪಬ್‌ನ ಡಿಜೆಗೆ ತಮಗೆ ಇಷ್ಟವಾದ ಹಾಡನ್ನು ಹಾಕಲು ಓರ್ವ ಮಹಿಳೆ 1500 ರೂ. ಹಣ ಕೊಟ್ಟಿದ್ದಾರೆ. ಆದ್ರೆ, ಅದಕ್ಕೆ ನಿರಾಕರಿಸಿದ ಡಿಜೆಯೊಂದಿಗೆ ಮಹಿಳೆಯರು ತೀವ್ರ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಜತೆ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಪಬ್​​ ಬೌನ್ಸರ್​​ಗಳು ಮೂವರು ಮಹಿಳೆಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯರ ಬಟ್ಟೆಯನ್ನು ಕಿಡಿಗೇಡಿಗಳು ಹರಿದಿದ್ದಾರೆ. ಸಹಾಯ ಪಡೆಯಲು ತಕ್ಷಣವೇ ಪೊಲೀಸರಿಗೆ ಕರೆ ಮಾಡುವ ವೇಳೆ ಬೌನ್ಸರ್​​ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಹಲ್ಲೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಮಧ್ಯರಾತ್ರಿಯವರೆಗೆ ಅಧಿಕ ಸೌಂಡ್​​ ಬಳಸಿ ಹಾಡುಗಳನ್ನು ಪ್ಲೇ ಮಾಡಿದ ಡಿಜೆ ವಿರುದ್ಧ ಮತ್ತೊಂದು ಎಫ್‌ಐಆರ್ ಹಾಕಿದ್ದಾರೆ. ಮಿಕ್ಸರ್, ಸ್ಪೀಕರ್ ಸೇರಿದಂತೆ ಡಿಜೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).
ನಟಿ ಕೃತಿ ಶೆಟ್ಟಿಯ ಹೊಸ ಲುಕ್​​ಗೆ ಫಿದಾ ಆದ ಫ್ಯಾನ್ಸ್​; ಇಲ್ಲಿವೆ ನೋಡಿ ಫೋಟೋಗಳು..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:13 − 6 =
Remember me
