ಮುಂಬೈ:ಜವಾಹರ‌ಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್​ಯು) ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಡೆದ ಗುಂಪು ಹಲ್ಲೆಯನ್ನು ಖಂಡಿಸಿ, ಮುಂಬೈನ ಭಾರತದ ಹೆಬ್ಬಾಗಿಲು ಬಳಿ ಭಾನುವಾರ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಮುಂಬೈ ಪೊಲೀಸರು ಬಲವಂತವಾಗಿ ಭಾರತದ ಹೆಬ್ಬಾಗಿಲಿನಿಂದ 2 ಕಿ.ಮೀ ದೂರದಲ್ಲಿರುವ ಆಜಾದ್​ ಮೈದಾನಕ್ಕೆ ಎಳೆದೊಯ್ಯಲಾಗಿದೆ.
ಮಂಗಳವಾರ ಬೆಳಗ್ಗೆ ಅಧಿಕ ಸಂಖ್ಯೆಯಲ್ಲಿ ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಗೇಟ್​ವೇ ಆಫ್​ ಇಂಡಿಯಾ ಮುಂಬೈ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸ್​ ವ್ಯಾನ್​ಗಳಲ್ಲಿ ತುಂಬಿಕೊಂಡು ಆಜಾದ್​ ಮೈದಾನಕ್ಕೆ ಕರೆದೊಯ್ದರು.
ಈ ಬಗ್ಗೆ ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು ಮುಂಬೈ ಗೇಟ್​ವೇ ಬಳಿ ಯಾವುದೇ ಶೌಚಗೃಹ ಮತ್ತು ನೀರಿನ ಅನುಕೂಲಗಳಾಗಲಿ ಇಲ್ಲ. ಮುಂಬೈನ ಜನನಿಬಿಡ ಪ್ರದೇಶವಾಗಿರುವ ಸ್ಥಳದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸವಾಲಾಗಿದೆ. ಹೀಗಾಗಿ ಅವರನ್ನು ಆಜಾದ್​ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಂತಿ ಕಾಪಾಡುವಂತೆ ಎರಡ್ಮೂರು ಬಾರಿ ಪ್ರತಿಭಟನಾಕಾರರ ಬಳಿ ಮನವಿ ಮಾಡಿಕೊಂಡೆವು. ಅವರಿಂದಾಗಿ ರಸ್ತೆಗಳು ಕೂಡ ಬ್ಲಾಕ್​ ಆಗಿದ್ದವು. ಇಂದರಿಂದ ಸಾಕಷ್ಟು ಜನರಿಗೆ ತೊಂದರೆಯಾಯಿತು. ದೈನಂದಿನ ಜನಜೀವನಕ್ಕೂ ಅಡ್ಡಿಯಾಯಿತು. ಈ ಕಾರಣದಿಂದ ಮಾನವೀಯ ದೃಷ್ಟಿಯಿಂದಲೇ ಪೊಲೀಸರು ಕ್ರಮ ಕೈಗೊಳ್ಳಬೇಕಾಯಿತು ಎಂದರು.
ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆದ ಒಂದು ಗಂಟೆಯ ಬಳಿಕ ವಿದ್ಯಾರ್ಥಿಗಳೇ ಹೆಚ್ಚು ತುಂಬಿದ್ದ ಗುಂಪು ದಕ್ಷಿಣ ಮುಂಬೈನ ಸಮುದ್ರ ತೀರದ ಬಳಿಯಿರುವ ಸ್ಮಾರಕದ ಬಳಿ ಒಟ್ಟಿಗೆ ಸೇರಲು ಭಾನುವಾರ ಮಧ್ಯರಾತ್ರಿ ಆರಂಭಿಸಿತು. ಮೇಣದ ಬೆಳಕಿನ ಮರವಣಿಗೆಯಿಂದ ಆರಂಭವಾದ ಪ್ರತಿಭಟನೆಯಲ್ಲಿ ಜೆಎನ್​ಯುನ ಹಳೇ ವಿದ್ಯಾರ್ಥಿಗಳಾಗಿರುವ ಉಮರ್​ ಖಾಲಿದ್​ ಮತ್ತು ಕುನಾಲ್​ ಕುಮ್ರಾ ಕೂಡ ಭಾಗವಹಿಸಿದ್ದರು. ಬಳಿಕ ಸಿನಿಮಾ ಕ್ಷೇತ್ರದ ಅನೇಕರು ಮತ್ತು ಇತರೆ ಸೆಲೆಬ್ರಿಟಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಜೆಎನ್​ಯು ಕಡೆಗಿನ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿರುವ ವಿಡಿಯೋಗಳಲ್ಲಿ ರಾಷ್ಟ್ರ ಧ್ವಜ ಹಿಡಿದು ಹಲ್ಲೆ ವಿರೋಧಿಸಿ ಘೋಷಣೆ ಕೂಗುತ್ತಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಹಲವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್​(ಎಬಿವಿಪಿ) ಸಂಘಟನೆಯನ್ನು ಟರ್ಗೇಟ್​ ಮಾಡಿ ಘೋಷಣೆ ಕೂಗಲಾಗಿದೆ. ಬಿಜೆಪಿ ವಿದ್ಯಾರ್ಥಿ ಒಕ್ಕೂಟದ ಎಬಿವಿಪಿ ಸದಸ್ಯರು ಹಲ್ಲೆ ಮಾಡಿರುವುದಾಗಿ ಜೆಎನ್​ಯು ಆರೋಪಿಸಿದೆ. ದೇಶಾದ್ಯಂತ ಹಲ್ಲೆಗೆ ಭಾರಿ ಖಂಡನೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್​)
Mumbai: Protesters(protesting against#JNUViolence) at Gateway of India evicted by Police and relocated to Azad Maidan. (earlier visuals)pic.twitter.com/llYz0OAfYD— ANI (@ANI)January 7, 2020
Mumbai: Protesters(protesting against#JNUViolence) at Gateway of India evicted by Police and relocated to Azad Maidan. (earlier visuals)pic.twitter.com/llYz0OAfYD
Mumbai: Protesters(protesting against#JNUViolence) at Gateway of India evicted by Police and relocated to Azad Maidan. (earlier visuals)pic.twitter.com/tSTB9rXiXb— ANI (@ANI)January 7, 2020
Mumbai: Protesters(protesting against#JNUViolence) at Gateway of India evicted by Police and relocated to Azad Maidan. (earlier visuals)pic.twitter.com/tSTB9rXiXb
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
