ಬೆಂಗಳೂರು:ಹೂಡಿಕೆ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಸೈಬರ್​ ವಂಚನೆ ಪ್ರಕರಣವನ್ನು ಬೆಂಗಳೂರು ನಗರ ಸೈಬರ್​ ಕ್ರೈಂ ಪೊಲೀಸರು ಭೇದಿಸಿದ್ದು, 854 ಕೋಟಿ ರೂಪಾಯಿ ಮೊತ್ತದ  ಹಗರಣವನ್ನು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮನೋಜ್ ಅಲಿಯಾಸ್ ಜಾಕ್, ಶ್ರೀನಿವಾಸ, ಚಕ್ರಾಧರ, ಸೋಮಶೇಖರ್, ಫಣೀಂದ್ರ ಎಂದು ತಿಳಿದು ಬಂದಿದೆ. national cyber crime reporting portal (NCCRP) ನಲ್ಲಿ ಈ ವಂಚನೆ ಬಗ್ಗೆ 5013 ಪ್ರಕರಣ ದಾಖಲಾಗಿದ್ದವು.
ಬೆಂಗಳೂರಿನಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳನ್ನ ಸೈಬರ್ ಪೊಲೀಸರು ಬೆನ್ನು ಹತ್ತಿದ್ದರು. ಈ ವೇಳೆ ರಾಜಧಾನಿಯಲ್ಲಿ 17 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಇದರ ಅಕೌಂಟ್ ನಿರ್ವಹಣೆ ಮಾಡುತ್ತಿರುವುದು ಬೆಂಗಳೂರಿನಲ್ಲೇ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:VIDEO| ಶಿವನ ದೇವಾಲಯಕ್ಕೆ ನುಗ್ಗಿ ಭಕ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಮುಸ್ಲಿಂ ಯುವಕ
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್, ವಾಟ್ಸಾಪ್, ಟೆಲಿಗ್ರಾಮ್ ಮೂಲಕ ಸಾರ್ವಜನಿಕರಿಂದ ಹಣ ಹೂಡಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನ ಬೇಧಿಸಿದ್ದಾರೆ. ಬೆಂಗಳೂರಿನಲ್ಲಿ 17 ಪ್ರಕರಣಗಳು ದಾಖಲಾಗಿದ್ದವು. ಬೇರೆ ಬೇರೆ ಹಣ ಅಕೌಂಟ್‌ಗೆ ವರ್ಗಾವಣೆ ಆಗುತ್ತಿದ್ದವು. ದೇಶದಾದ್ಯಂತ 5013  ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 84 ಅಕೌಂಟ್ ಗಳ ಮೂಲಕ 854 ಕೋಟಿ ರೂಪಾಯಿ ವರ್ಗಾವಣೆ ಆಗಿದೆ.
ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದೇವೆ. 5 ಕೋಟಿ ಹಣ ಸೇರಿ ಲ್ಯಾಪ್‌ಟಾಪ್ ಪ್ರಿಂಟರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಮೂವರು ಮಾಸ್ಟರ್ ಮೈಂಡ್‌ಗಳಿಗೆ ಹುಡುಕಾಟ ನಡೀತಿದೆ. ಬಂಧಿತ ಆರೋಪಿಗಳು ಬೆಂಗಳೂರಿನವರಾಗಿದ್ದಾರೆ. ಚೈನ್ ಲಿಂಕ್ ಮೂಲಕ ಈ ದಂಧೆ ನಡೆಯುತ್ತಿತ್ತು. ಫೇಕ್ ಅಕೌಂಟ್ ಮೂಲಕ ವರ್ಗಾವಣೆ ನಡೆಯುತ್ತಿತ್ತು. ಬೆಂಗಳೂರು ನಗರದಲ್ಲೇ 49 ಲಕ್ಷ ರೂ. ವಂಚನೆ ಆಗಿದೆ. ದೇಶದ ಸಾಕಷ್ಟು ಅಮಾಯಕರು ಮೋಸ ಹೋಗಿದ್ದಾರೆ ಎಂದು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
