ನವದೆಹಲಿ:20 ವರ್ಷದ ಬಾಲಕನೊಬ್ಬ ತಾನು ಕಾರ್ಟೂನ್​ ಮತ್ತು ಸಿನಿಮಾಗಳಲ್ಲಿ ಬರುವ ಸ್ಪೈಡರ್​ಮ್ಯಾನ್ ಪಾತ್ರವನ್ನು ನೈಜವಾಗಿ ಅನುಭವಿಸುವ ಸಲುವಾಗಿ ಥೇಟ್​ ಅದೇ ರೀತಿ ವೇಷ ಧರಿಸಿ, ನಡುರಸ್ತೆಯಲ್ಲಿ ಹುಚ್ಚಾಟ ಪ್ರದರ್ಶಿಸಲು ಹೋಗಿ ಇದೀಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ. ಆತಂಕ ಮೂಡಿಸುವ ಭಯಾನಕ ಸ್ಟಂಟ್ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ಟಿ20 ಸರಣಿ ಬೆನ್ನಲ್ಲೇ ಶ್ರೀಲಂಕಾ ತಯಾರಿಗೆ IPL ಫ್ರಾಂಚೈಸಿ ಸಹಾಯ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ಜಯಸೂರ್ಯ
ಸ್ಪೈಡರ್​ಮ್ಯಾನ್​, ಬ್ಯಾಟ್​ಮ್ಯಾನ್​ ಹೀಗೆ ಸೂಪರ್​ಹೀರೋ ಸಿನಿಮಾಗಳನ್ನು ನೋಡಿ ಅದರಿಂದ ಪ್ರಭಾವಿತರಾಗಿ ಕೆಲವರು ನಾವು ಕೂಡ ಸೂಪರ್ ಹೀರೋಗಳು ಎಂದೇ ಭಾವಿಸಿ, ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆಗಳು ಈ ಹಿಂದೆ ಸಾಕಷ್ಟು ವರದಿಯಾಗಿವೆ. ಅದನ್ನೆಲ್ಲಾ ಮಾಧ್ಯಮಗಳಲ್ಲಿ ನಾವು ಕಂಡಿದ್ದೇವೆ. ಇದೇ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದ್ದು, ಅದೃಷ್ಟವಶಾತ್​ ಬಾಲಕ ಸಾವಿನಿಂದ ಪಾರಾಗಿದ್ದಾನೆ. ದೆಹಲಿಯ ಮುಖ್ಯ ರಸ್ತೆಯಲ್ಲಿ ತನ್ನ ಸ್ನೇಹಿತನಿಗೆ ಕಾರನ್ನು ವೇಗವಾಗಿ ಚಲಾಯಿಸಲು ಹೇಳಿ, ತಾನು ಸ್ಪೈಡರ್​ಮ್ಯಾನ್​ ಉಡುಗೆ ತೊಟ್ಟು ಕಾರಿನ ಬಾನೆಟ್​ ಮೇಲೆ ಕುಳಿತು ದುಸ್ಸಾಹಸ ಪ್ರದರ್ಶಿಸಿದ್ದಾನೆ.
ದೂರು ಪಡೆಯುತ್ತಿದ್ದಂತೆ ದೆಹಲಿ ಪೊಲೀಸರು ಬಾಲಕರನ್ನು ದ್ವಾರಕ ನಗರದ ಸರ್ಕಲ್​ನಲ್ಲಿ ಸೆರೆಹಿಡಿದಿದ್ದು, ತಪ್ಪಿಸಿಕೊಂಡು ಓಡದಂತೆ ಲಾಕ್ ಮಾಡಿದ್ದಾರೆ. ಕಾರು ಚಲಾಯಿಸುತ್ತಿದ್ದ 19 ವರ್ಷದ ಬಾಲಕ ಮತ್ತು ಸ್ಪೈಡರ್​ಮ್ಯಾನ್ ರೀತಿ ಡ್ರೆಸ್​ ಮಾಡಿಕೊಂಡಿದ್ದ 20 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಅಪಾಯಕಾರಿ ಚಾಲನೆ ಹಾಗೂ ಇತರೆ ನಿಯಮ ಉಲ್ಲಂಘನೆಗಾಗಿ ಪೊಲೀಸರು ಬಾಲಕರಿಗೆ 26,000 ರೂ. ದಂಡ ವಿಧಿಸಿದ್ದಾರೆ. ಸದ್ಯ ಘಟನೆಯ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ದಾವಣಗೆರೆ ಸ್ಮಾರ್ಟ್‌ಸಿಟಿ ಸಾಧನೆಗೆ ಮತ್ತೊಂದು ಗರಿ
ಅಪಾಯಕಾರಿ ಚಾಲನೆ, ಮಾಲಿನ್ಯ ಪ್ರಮಾಣಪತ್ರವಿಲ್ಲದೆ ಡ್ರೈವಿಂಗ್​ ಮತ್ತು ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಲಾಗಿದ್ದು, 26,000 ರೂ. ದಂಡ ಅಥವಾ ಜೈಲು ಶಿಕ್ಷೆಯನ್ನು ಕಾರಿನ ಮಾಲೀಕರು ಮತ್ತು ಚಾಲಕ ಇಬ್ಬರಿಗೂ ವಿಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).
ನಿಮ್ಮ ಕರಿಯರ್​ನಲ್ಲಿ ಇದೊಂದೇ ಬಾಕಿ! ವಿರಾಟ್​ ಕೊಹ್ಲಿಗೆ ವಿಶೇಷ ಆಹ್ವಾನ ಕೊಟ್ಟ ಪಾಕ್​ ಮಾಜಿ ಕ್ರಿಕೆಟಿಗ

ಐಸಿಸಿಗೆ ಗಾಳ ಹಾಕಿದ ಪಿಸಿಬಿ! ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಕರೆಸಿಕೊಳ್ಳಲು ಸಖತ್ ಪ್ಲಾನ್ ಮಾಡಿದೆ ಪಾಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 8 =
Remember me
