ನವದೆಹಲಿ:ರಾಜ್ಯದಲ್ಲಿ ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ಸದ್ದು ಮಾಡುತ್ತಿದ್ದರೆ ದೇಶದಲ್ಲಿ ಹನುಮಾನ್​ ಚಾಲೀಸ ಸುದ್ದಿಯಾಗುತ್ತಿದೆ. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಆಜಾನ್​ ಕೂಗುತ್ತಿರುವುದರ ವಿರುದ್ಧ ಕಳೆದ ಕೆಲವು ದಿನಗಳಿಂದ ದೇಶದ ವಿವಿಧೆಡೆ ಹನುಮಾನ್ ಚಾಲೀಸ ಅಭಿಯಾನ ನಡೆಯುತ್ತಿದ್ದು, ಅದನ್ನು ಇಂದು ಕುತುಬ್ ಮಿನಾರ್​ ಬಳಿಯೂ ನಡೆಸಲು ಯತ್ನಿಸಲಾಗಿದೆ.
ರಾಷ್ಟ್ರದ ರಾಜಧಾನಿಯಲ್ಲಿರುವ ಐತಿಹಾಸಿಕ ಹಾಗೂ ವಿಶ್ವ ಪಾರಂಪರಿಕ ತಾಣವಾದ ಕುತುಬ್ ಮಿನಾರ್​ ಬಳಿ ಹಿಂದು ಸಂಘಟನೆಯವರೆನ್ನಲಾದ ಸುಮಾರು ಐವತ್ತು ಮಂದಿ ಜಮಾಯಿಸಿ, ಹುನುಮಾನ್ ಚಾಲೀಸ ಪಠನ ಮಾಡುವುದಾಗಿ ಹೇಳಿಕೊಂಡಿದ್ದರು.
ಯುನೈಟೆಡ್ ಹಿಂದೂ ಫ್ರಂಟ್​ (ಯುಎಚ್​ಎಫ್​) ಕಾರ್ಯಾಧ್ಯಕ್ಷ ಜೈ ಭಗವಾನ್ ಗೋಯಲ್ ಕರೆ ಮೇರೆಗೆ ಈ ಕಾರ್ಯಕರ್ತರು ಹನುಮಾನ್ ಚಾಲೀಸ ಪಠನಕ್ಕಾಗಿ ಕುತುಬ್ ಮಿನಾರ್ ಬಳಿ ಜಮಾಯಿಸಿದ್ದರು.
ಹೀಗೆ ಹನುಮಾನ್ ಚಾಲೀಸ ಪಠನಕ್ಕಾಗಿ ಜಮಾಯಿಸಿದ್ದವರೆಲ್ಲ ಯುನೈಟೆಡ್​ ಹಿಂದೂ ಫ್ರಂಟ್ ಮತ್ತು ರಾಷ್ಟ್ರವಾದಿ ಶಿವಸೇನಾ ಕಾರ್ಯಕರ್ತರು ಎನ್ನಲಾಗಿದ್ದು, ಆ ಪೈಕಿ 44 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ದೆಹಲಿಯ ಡಿಸಿಪಿ ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.
ಸುಪ್ರಭಾತ ಅಭಿಯಾನ ಹಿಂಪಡೆದ ಶ್ರೀರಾಮಸೇನೆ; ಅದಕ್ಕೆ ಕಾರಣವಿದು…

ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ, ಸುಪ್ರೀಂಕೋರ್ಟ್​​ನಿಂದಲೇ ಸೂಚನೆ; ದೇಶಾದ್ಯಂತದ ಎಲ್ಲ ಪಾಲಿಕೆಗಳಿಗೂ ಅನ್ವಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
