ಮುಂಬೈ:ಸಶಸ್ತ್ರ “ಭಯೋತ್ಪಾ ದಕನೊಬ್ಬ” ಮಹರಾಷ್ಟ್ರಾದ ಧೂಲ್ನಲ್ಲಿ ಕಿಕ್ಕಿರಿದ ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. ಇದರಿಂದ ಎಲ್ಲರೂ ಭಯಭೀತರಾಗಿದ್ದು, ಒಬ್ಬ ಮಾತ್ರ ನೇರವಾಗಿ ಬಂದೂಕುಧಾರಿ ತೆರಳಿ ಕಪಾಳಮೋಕ್ಷ ಮಾಡಿದ್ದಾರೆ. ಹಾಗೆ ತೆರಳುವಾಗ ಆ ವ್ಯಕ್ತಿ, ದೇವಸ್ಥಾನದಲ್ಲಿ ಭಯೋತ್ಪಾದಕನಿಗೇನು ಕೆಲಸ? ಎಂದು ಕೇಳುತ್ತಾ ತೆರಳಿದ್ದರು ಎನ್ನಲಾಗಿದೆ. ಅವರು ರೈಫಲ್ ಹೊತ್ತ “ಭಯೋತ್ಪಾದಕ” ಕಡೆಗೆ ಹೋಗಿ ಬಿಗಿಯಾದ ಹೊಡೆತವನ್ನು ನೀಡಿದರು.
ಆದರೆ “ಭಯೋತ್ಪಾದಕನ” ಮುಖದ ಮೇಲೆ ಬಿಗಿಯಾದ ಹೊಡೆತ ಬಿದ್ದರೂ ಕೆಲವೇ ನಿಮಿಷಗಳ ಸನ್ನಿವೇಶ ತಿಳಿ ಹಾಸ್ಯವಾಗಿ ಬದಲಾಯಿತು.
ಒಬ್ಬ, ತನ್ನ ಕೈಯಲ್ಲಿ ರೈಫಲ್ ಮತ್ತು ಅವನ ಮುಖವನ್ನು ಮುಚ್ಚಿ ಕಪ್ಪು ಬಟ್ಟೆಯನ್ನು ಇಟ್ಟುಕೊಂಡು ಜನರಿಂದ ಕಿಕ್ಕಿರಿದಿದ್ದ ಸ್ವಾಮಿನಾರಾಯಣ ದೇವಾಲಯಕ್ಕೆ ಪ್ರವೇಶಿಸಿದ್ದ. ಇದರಿಂದಾಗಿ ಮಹರಷ್ಟ್ರಾದ ಧೂಲ್ ನಗರದ ಜನತೆ ಒಂದು ಆಘಾತಕ್ಕೆ ಒಳಗತ್ತು. “ಭಯೋತ್ಪಾದಕ” ಹಠಾತ್ ಆಗಿ ಪ್ರತ್ಯಕ್ಷನಾದದ್ದು ಸಂದರ್ಶಕರಲ್ಲಿ ಗದ್ದಲಕ್ಕೆ ಕಾರಣವಾಯಿತು.
ತಕ್ಷಣವೇ ಪ್ರಕತ್ಯಕ್ಷರಾದ ಪೊಲಿಸರು ಜನರಿಗೆ ಶಾಕ್​ ನೀಡಿದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಪೊಲೀಸರು ಸಾರ್ವಜನಿಕರಿಗೆ ಇದು ನಿಜವಾದ ಭಯೋತ್ಪಾದಕ ಪರಿಸ್ಥಿತಿ ಅಲ್ಲ, ಆದರೆ ಅವರು ನಡೆಸಿದ ಡ್ರಿಲ್ ಎಂದು ಮಾಹಿತಿ ನೀಡಿದರು. ಅಂತಹ ಸಂದರ್ಭಗಳಲ್ಲಿ ನಾಗರಿಕರು ಯಾವ ರೀತಿ ವರ್ತಿಸುತ್ತಾರೆ ಎನ್ನುವುದನ್ನು ಗಮನಿಸುವುದು ಈ ಡ್ರಿಲ್​ನ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.
ಇದು ಪೊಲೀಸ್ ಡ್ರಿಲ್ ಎಂದು ತಿಳಿದ ನಂತರ ಮತ್ತು ಭಯೋತ್ಪಾದಕನಾಗಿ ಪೋಸ್ ನೀಡುವ ವ್ಯಕ್ತಿ ಒಬ್ಬ ಪೋಲೀಸ್ ಎಂಬುದು ಗೊತ್ತಾದ ನಂತರ, ಕಪಾಳಮೋಕ್ಷ ಮಾಡಿದ್ದವನ ಕೋಪ ಶಮನವಾಗಿದೆ. ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದವನನ್ನು ಪ್ರಶಂತ್ ಕುಲ್ಕರ್ಣಿ ( 35 ) ಎಂದು ಗುರುತಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
