ಕೊಚ್ಚಿ:ಮಹಿಳಾ ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ ದುಬಾರಿ ಐಫೋನ್​ ಅನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವ ಮೂಲಕ ಕೇರಳದ ಪೊಲೀಸರು ತಮ್ಮ ವೃತ್ತಿಪರತೆ ಮೆರೆದಿದ್ದಾರೆ.
ಚಾಲಕುಡಿ ಮೂಲದ ಶಂಕರಿ ಸುಜಾ ಅವರು ಕೊಚ್ಚಿಯ ಪುತ್ತುವೈಪೆ ಬೀಚ್‌ಗೆ ಭೇಟಿ ನೀಡಿದಾಗ 2 ಲಕ್ಷ ರೂ. ಮೌಲ್ಯದ ಐಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ವೈಜ್ಞಾನಿಕ ತನಿಖೆಯಿಂದ ಸ್ವಿಚ್ ಆಫ್ ಆಗಿದ್ದ ಫೋನ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ:ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ
ಶಂಕರಿ ಅವರ ಪತಿ ಯುಎಸ್‌ಎಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೋನ್​ನಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ಡೇಟಾ ಇತ್ತು. ಮೇ 29 ರಂದು ಫೋನ್​ ಕಳೆದುಹೋಗಿತ್ತು. ಶಂಕರಿ ಅವರು ಸುದೀರ್ಘ ಹುಡುಕಾಟದ ನಂತರ ಮುಳವುಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆಯ ನಡೆಸಿದಾಗ ಎರ್ನಾಕುಲಂ ನಾರ್ತ್ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಫೋನ್ ಪತ್ತೆಯಾಯಿತು.
ಶಂಕರಿ ಸುಜಾ ಮತ್ತು ಅವರ ಸಂಬಂಧಿಕರು ಫೋನ್ ವಾಪಸ್ ಪಡೆದ ಖುಷಿಯಲ್ಲಿ ಪೊಲೀಸರನ್ನು ಶ್ಲಾಘಿಸಿ, ಧನ್ಯವಾದ ಅರ್ಪಿಸಿ ಹಿಂತಿರುಗಿದರು. ಮುಳವುಕಾಡು ಸಬ್ ಇನ್ಸ್​ಪೆಕ್ಟರ್ ಎನ್.ಜೆ.ಸುನೇಖ್, ಎಎಸ್​ಐ ನಾಸರ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ರಾಜೇಶ್, ಅರುಣ್ ಬಾಬು, ಸಿಬಿಲ್ ಭಾಸಿ ಅವರು ಫೋನ್​ಗಾಗಿ ಹುಡುಕಾಟ ನಡೆಸಿದರು.(ಏಜೆನ್ಸೀಸ್​)
ಸಿಎಂ ಸಿದ್ದರಾಮಯ್ಯ ಸಲಹೆಗಾರರಾಗಿ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ನೇಮಕ

ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ; ವಿಜಯವಾಣಿ ಸಂವಾದದಲ್ಲಿ ಕೃಷಿ ಸಚಿವ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
