ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ಪರ ಮತ್ತು ವಿರೋಧ ಹೋರಾಟದಿಂದಾಗಿ ಸಾವಿಗೀಡಾದವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು ಬೆಳಗ್ಗೆ ಚರಂಡಿಯಿಂದ ಎರಡು ಶವವನ್ನು ಹೊರತೆಗೆಯಲಾಗಿದೆ.
ಗಂಗವಿಹಾರ್​ ಜೊಹ್ರಿಪುರದ ವಿಸ್ತರಣೆ ಪ್ರದೇಶದಲ್ಲಿರುವ ಚರಂಡಿಯಲ್ಲಿ ಎರಡು ಶವಗಳು ಪತ್ತೆಯಾಗಿದ್ದು ಅವುಗಳನ್ನು ಹೊರತೆಗೆಯಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚರಂಡಿಯೊಳಗೆ ಇನ್ನೂ ಶವಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವಕನೊಬ್ಬನನ್ನು ಹಿಂಸಾಚಾರದಲ್ಲಿ ಕೊಲ್ಲಲಾಗಿದ್ದು ಆತನ ಶವವು ಬುಧವಾರದಂದು ಚರಂಡಿಯಲ್ಲಿ ಪತ್ತೆಯಾಗಿತ್ತು. ಆತನನ್ನು ಮನೆಯಿಂದ ಎಳೆದು ತಂದು ಕೊಲೆ ಮಾಡಿದ್ದಾಗಿ ಹೇಳಲಾಗಿತ್ತು.
ದೆಹಲಿಯ ಹಿಂಸಾಚಾರದಿಂದಾಗಿ ಸತ್ತವರ ಸಂಖ್ಯೆ 35ಕ್ಕೆ ತಲುಪಿದೆ. ಇನ್ನೂ ಹೆಚ್ಚೆಚ್ಚು ಶವಗಳು ಪತ್ತೆಯಾಗುತ್ತಿರುವುದು ವರದಿಯಾಗಿದೆ.(ಏಜೆನ್ಸೀಸ್​)
ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ; ಇಂದು ಮೋರಿಯಲ್ಲಿ ಸಿಕ್ತು ಅವರ ಮೃತದೇಹ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − one =
Remember me
