ನಿಜಾಮಾಬಾದ್​:ನವೆಂಬರ್​ 25ರಂದು ತೆಲಂಗಾಣದ ಕಾಮರೆಡ್ಡಿ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ಗೆ ಸಂಬಂಧಿಸಿದ ಬ್ಯಾಂಕ್​ ಲಾಕರ್​ ತೆರೆದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ 34,40,200 ರೂ. ನಗದು ಮತ್ತು 9,12,800 ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.
ಇನ್ಸ್​ಪೆಕ್ಟರ್​ ಐ. ಜಗದೀಶ್​ರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅಡಿಯಲ್ಲಿ ಎಸಿಬಿ ಅಧಿಕಾರಿಗಳು ನ. 21ರಂದು ಬಂಧಿಸಿದ್ದರು. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು 5 ಲಕ್ಷ ರೂ. ಲಂಚ ತೆಗೆದುಕೊಂಡಿರುವ ಆರೋಪದಲ್ಲಿ ಜಗದೀಶ್​ರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದಾಗ ಇನ್ಸ್​ಪೆಕ್ಟರ್​ ಅಕ್ರಮವಾಗಿ ಸಂಪಾದಿಸಿದ್ದ ಹಣ ಪತ್ತೆಯಾಗಿದೆ.
ನ.8 ರಂದು ತೆಲಂಗಾಣ ಸರ್ಕಾರದ ಗೇಮಿಂಗ್​ ಕಾಯ್ದೆ ಅಡಿಯಲ್ಲಿ ಬಥುಲಾ ಸುಧಾಕರ್​ ಎಂಬಾತನ ವಿರುದ್ಧ ಕಾಮರೆಡ್ಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನವಾದ ದಿನದಂದೇ ಸುಧಾಕರ್​ ಬಿಡುಗಡೆಯಾಗಿದ್ದ. ಇದು ಲಂಚದ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಮಾಹಿತಿ ಪಡೆದು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಲಂಚಬಾಕ ಇನ್ಸ್​ಪೆಕ್ಟರ್​ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಉಸಿರೇ ವಿಷವಾದರೆ ಬದುಕುವುದು ಹೇಗೆ?; ತೇಜಸ್ವಿನಿ ಅನಂತಕುಮಾರ್ ಅವರ ಅಂಕಣ
Found in the locker of Jagadish, inspector Kamareddy.pic.twitter.com/bDDf3Vep9o
— @Coreena Enet Suares (@CoreenaSuares2)November 25, 2020

ಸರ್ಕಾರಿ ಕೆಲಸವನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಂಡು ಕರ್ತವ್ಯಕ್ಕೆ ಇನ್ಸ್​ಪೆಕ್ಟರ್​ ಜಗದೀಶ್​ ಮೋಸವೆಸಗಿದ್ದಾನೆ. ಜಗದೀಶ್​ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜಗದೀಶ್​ ಮತ್ತು ಆತನ ಪತ್ನಿ ಕಮಲೇಶ್ವರದಲ್ಲಿರುವ ಆ್ಯಕ್ಸಿಕ್​ ಬ್ಯಾಂಕ್​ ಲಾಕರ್​ ಉಪಯೋಗಿಸುತ್ತಿದ್ದರು ಎಂಬ ವಿಚಾರ ತನಿಖೆಯ ವೇಳೆ ಬಯಲಾದಾಗ, ಬ್ಯಾಂಕ್​ಗೆ ಭೇಟಿ ನೀಡಿ ಲಾಕರ್​ ತೆರೆದಾಗ ಎಸಿಬಿ ಅಧಿಕಾರಿಗಳಿಗೆ ನಗದು ಮತ್ತು ಚಿನ್ನಾಭರಣ ಸಿಕ್ಕಿದೆ. ಸದ್ಯ ವಿಚಾರಣೆ ಮುಂದುವರಿದಿದೆ.(ಏಜೆನ್ಸೀಸ್​)
ಮೀಸಲಾತಿ ರದ್ದು ಆದೇಶಕ್ಕೆ ನ್ಯಾಯಾಲಯ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 4 =
Remember me
