ಲಖನೌ:ಕಳ್ಳ, ಕಾಕರಿಂದ ಜನರನನ್ಉ ರಕ್ಷಿಸಬೇಕಾಗಿರುವ ಪೊಲೀಸರು ಲೂಟಿಕೋರರಾದರೆ ಸಾರ್ವಜನಿಕರ ಗತಿಯೇನು ಎಂದು ಅನುಮಾನ ಮೂಡುವುದು ಸಹಜ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದ್ದು ಪೊಲೀಸ್​ ಇಲಾಖೆ ತೀವ್ರ ಮುಜುಗರಕ್ಕೀಡಾಗಿದೆ.
ಘಟನೆಯೂ ಉತ್ತರಪ್ರದೇಶದ ಔರೈಯಾದಲ್ಲಿ ನಡೆದಿದ್ದು ಪೊಲೀಸ್​ ಎಸ್​ಐ ಹಾಗೂ ಪೇದೆ ವ್ಯಾಪಾರಿ ಒಬ್ಬರಿಂದ ಸುಮಾರು 50 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ಕದ್ದು ಪರಾರಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.
ಜೂನ್​ 6ರಂದು ರಾತ್ರಿ ಭೋಗಾನಿಪುರ ಠಾಣೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಚಿಂತನ್​ ಕೌಶಿಕ್​ ಹಾಗೂ ಪೇದೆ ರಾಮ್​ಶಂಕರ್ ಯಾದವ್​ ಔರೈಯಾ ಗಡಿ ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮನೀಶ್​ ಸೋನಿ ಎಂಬ ಉದ್ಯಮಿಯ ಕಾರನ್ನು ನಿಲ್ಲಿಸಿದ್ದ ಇಬ್ಬರು ಆರೋಪಿಗಳು ಚೆಕ್ಕಿಂಗ್​ ನೆಪದಲ್ಲಿ ಗಾಡಿಯಲ್ಲಿದ್ದ 50ಕೆಜಿ ತೂಕದ ಬೆಳ್ಳಿ ಆಭರಣವನ್ನು ಲಪಟಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಜೂನ್​ 7ರಂದು ಕಾರನ್ನು ಪರಿಶೀಲಿಸಿದಾಗ ಆಭರಣಗಳು ಕಾಣದಿದ್ಧಾಗ ಉದ್ಯಮಿಗೆ ಅನುಮಾನ ಬಂದಿದ್ದು, ಈ ಕುರಿತು ಔರೈಯಾ ಹಾಗೂ ಕಾನ್ಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿಷಯ ಕೇಳಿ ತಬ್ಬಿಬ್ಬಾದ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಶಾಂತಿ ಕದಡಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ: ಗೃಹ ಸಚಿವ ಪರಮೇಶ್ವರ್​
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಬ್​ಇನ್ಸ್​ಪೆಕ್ಟರ್​ನನ್ನು ಬಂಧಿಸಿ ಅವನ ಬಳಿಯಿದ್ದ 50 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಮ್​ಶಂಕರ್ ಯಾದವ್​ ತಲೆಮಾರಿಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಔರೈಯಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚಾರು ನಿಗಮ್​, ಕಾನ್ಪುರ ಎಸ್​ಪಿ ಬಿಬಿಜಿಟಿಎಸ್ ಮೂರ್ತಿ ಸಮ್ಮುಖದಲ್ಲಿ ಉದ್ಯಮಿ ಮನೀಶ್​ ಸೋನಿ ಅವರಿಗೆ ಬೆಳ್ಳಿ ಆಭರಣಗಳನ್ನು ಹಿಂತಿರುಗಿಸಲಾಗಿದೆ. ಆರೋಪಿ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 13 =
Remember me
