ಹೈದರಾಬಾದ್​:ಸರ್ವಿಸ್​ ರೈಫಲ್​ನಿಂದ ಅಕಸ್ಮಾತ್​ ಆಗಿ ಹಾರಿದ ಗುಂಡು ಪೊಲೀಸ್​ ಕಾನ್​ಸ್ಟೆಬಲ್​ ಒಬ್ಬರನ್ನು ಬಲಿ ಪಡೆದುಕೊಂಡಿದೆ. ಅಚಾನಕ್​ ಆಗಿ ಚಿಮ್ಮಿದ ಗುಂಡಿನಿಂದಾಗಿ ಕರ್ತವ್ಯದಲ್ಲಿದ್ದ 31 ವರ್ಷದ ಪೇದೆ ಮೃತಪಟ್ಟಿದ್ದಾರೆ.
ಹೈದರಾಬಾದ್​ನ ರಾಣಿಗುಂಜ್ ಪ್ರದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಇದ್ದ ಕಟ್ಟಡದಲ್ಲಿ ಭದ್ರತೆಗಾಗಿ ಈ ಪೊಲೀಸ್​ ನಿಯೋಜನೆಗೊಂಡಿದ್ದು, ಬೆಳಗ್ಗೆ ಏಳು ಗಂಟೆ ಸುಮಾರಿಗೆ ಈ ಅವಘಡ ನಡೆದಿದೆ.
ಸ್ಪೆಷಲ್ ಪ್ರೊಟೆಕ್ಷನ್​ ಫೋರ್ಸ್​​ನಲ್ಲಿದ್ದ ಇವರು, ಸೆಲ್ಫ್​ ಲೋಡಿಂಗ್ ರೈಫಲ್​ (ಎಸ್​ಎಲ್​ಆರ್​) ಹೊಂದಿದ್ದು, ಅದರಿಂದ ಚಿಮ್ಮಿದ ಗುಂಡು ಇವರ ಕೆನ್ನೆಯ ಮೂಲಕ ಹಾದುಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲೇ ಭದ್ರತೆಗೆ ನಿಯೋಜನೆ ಆಗಿದ್ದ ಇತರ ಮೂವರು ಪೊಲೀಸರು ಗುಂಡಿನ ಶಬ್ದ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಅಷ್ಟರಲ್ಲಿ ಪೊಲೀಸ್ ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
