ಕೊಲ್ಲಂ:ಜನನಿಬಿಡ ರಸ್ತೆಯಲ್ಲಿ ಬೈಕ್​ ಮೇಲೆಯೇ ಸ್ನಾನ ಮಾಡುತ್ತಾ, ಬೈಕ್ ಚಲಾಯಿಸಿ, ಹುಚ್ಚಾಟ ಮೆರೆದ ಸವಾರರಿಬ್ಬನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಕೊಲ್ಲಂನ ಸಸ್ಥಂಕೊಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಬೈಕ್​ ಸವಾರರನ್ನು ಅಜ್ಮಲ್​ ಮತ್ತು ಬದುಸಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸಿನಿಮಾಪರಂಬು ಮೂಲದವರು. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.
ಇಬ್ಬರೂ ಅರೆಬೆತ್ತಲೆಯಾಗಿ ಕೊಲ್ಲಂನ ಭರ್ಣಿಕ್ಕಾವು ಜಂಕ್ಷನ್ ಮೂಲಕ ಬೈಕ್​ ಮೇಲೆ ಸೋಪ್ ಹಚ್ಚಿಕೊಂಡು ಸ್ನಾನ ಮಾಡುತ್ತಾ ಸಾಗುತ್ತಿದ್ದರು. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಸಸ್ಥಂಕೊಟ್ಟ ಠಾಣಾ ಪೊಲೀಸರ ಗಮನಕ್ಕೆ ಬಂದಾಗ ಠಾಣೆಗೆ ಬರುವಂತೆ ಇಬ್ಬರಿಗೂ ಸೂಚನೆ ನೀಡಲಾಗಿತ್ತು. ಇಬ್ಬರು ನಿನ್ನೆ ಸಂಜೆ ಠಾಣೆಗೆ ಆಗಮಿಸಿದರು.
ಠಾಣೆಯಲ್ಲಿ ಸ್ಪಷ್ಟನೆ ನೀಡಿದ್ದ ಇಬ್ಬರೂ, ಆಟ ಮುಗಿಸಿ ವಾಪಸಾಗುತ್ತಿದ್ದ ವೇಳೆ ಮಳೆ ಬಂದಿತು. ಈ ವೇಳೆ ಫನ್​ಗಾಗಿ ಆ ರೀತಿ ಮಾಡಿದೆವು ಎಂದು ತಿಳಿಸಿದ್ದಾರೆ. ಯುವಕರು ಡ್ರಗ್ಸ್ ಸೇವಿಸಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಬ್ಬರಿಂದಲೂ ದಂಡ ವಸೂಲಿ ಮಾಡಿದ ಬಳಿಕ ಬಿಡುಗಡೆ ಮಾಡಿ ಕಳುಹಿಸಲಾಗಿದೆ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ
ಬ್ಲೂ ಟಿಕ್ ಬೇಕಾ? ಪ್ರತಿ ತಿಂಗಳು 8 ಡಾಲರ್ ಪಾವತಿಸಿ! ಇಂದಿನಿಂದಲೇ ಟ್ವಿಟರ್​ನಿಂದ ಹೊಸ ರೂಲ್ಸ್​ ಜಾರಿ
ವಿದೇಶಿ ನೌಕರಿ ಆಮಿಷ; ಅನಾಹುತದ ಸರಮಾಲೆ..
ಇಂದು ವಿಜಯಾನಂದ ಆಡಿಯೋ ಬಿಡುಗಡೆ; ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 3 =
Remember me
