ಭುವನೇಶ್ವರ:ಇಲ್ಲಿಗೆ ಸಮೀಪದ ಬಿರ್​ಮಿತ್ರಾಪುರ ಪೊಲೀಸ್​ ಠಾಣೆಯ ಉಸ್ತುವಾರಿ ಹೊತ್ತಿದ್ದ ಇನ್​ಸ್ಪೆಕ್ಟರ್​ ಆನಂದ್​ ಚಂದ್ರ ಮಾಂಝಿ ತನ್ನ ನಾಲ್ವರು ಸಹಚರರ ಜತೆಗೂಡಿ 13 ವರ್ಷದ ಬಾಲೆಯ ಮೇಲೆ ನಾಲ್ಕು ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಆಕೆ ಗರ್ಭ ಧರಿಸಿದ್ದ ವಿಷಯ ತಿಳಿದು ಗಭಪಾತವನ್ನೂ ಮಾಡಿಸಿದ್ದರು.
ಈ ವಿಷಯ ಬಹಿರಂಗಗೊಳ್ಳುತ್ತಲೇ ತಪ್ಪು ತಮ್ಮದಲ್ಲ ಎಂದು ಹೇಳಿಕೊಂಡು ಆನಂದ್​ ಚಂದ್ರ ಮಾಂಝಿ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಇದಾವುದನ್ನೂ ಪರಿಗಣಿಸದೆ ಒಡಿಶಾ ಡಿಜಿಪಿ ಅಭಯ್​ ಪ್ರಕರಣದ ತನಿಖೆಗೆ ಆದೇಶಿಸಿದ್ದರು.
ಇದನ್ನೂ ಓದಿ:ಪ್ರತಿ ಸೆಕೆಂಡ್​ಗೆ 3 ಲೆಕ್ಕಗಳನ್ನು ಬಿಡಿಸುವ 10ರ ಪೋರ!
ಈ ಹಿನ್ನೆಲೆಯಲ್ಲಿ ಸುಂದರ್​ಗಢ ಜಿಲ್ಲೆಯ ಬಿರ್​ಮಿತ್ರಾಪುರ ಮತ್ತು ರಾಯ್​ಬೋಗಾ ಪೊಲೀಸ್​ ಠಾಣೆಗಳಿಗೆ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಿಬಿ ತಂಡ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ಆನಂದ್​ ಚಂದ್ರ ಮಾಂಝಿ ಮತ್ತು ಅವರ ನಾಲ್ಚರು ಸಹಚರರು ಬಾಲೆಯ ಮೇಲೆ ಅತ್ಯಾಚಾರ ಮಾಡಿ, ಆಕೆ ಗರ್ಭ ಧರಿಸಿದಾಗ ಗರ್ಭಪಾತ ಮಾಡಿಸಿದ್ದು ಖಚಿತವಾಯಿತು.
ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಡಿಜಿಪಿ ಅಭಯ್​ ಇದೀಗ ಆನಂದ್​ ಚಂದ್ರ ಮಾಂಝಿ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಜತೆಗೆ ಸಂತ್ರಸ್ತೆಯ ಬಳಿ ಕ್ಷಮೆ ಕೋರಿದ್ದಾರೆ. ಗರ್ಭಪಾತ ಮಾಡಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನೂ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ.
ಟಿಕ್​​​ಟಾಕ್​ ನಿಷೇಧವನ್ನು ನೋಟು ಅಮಾನ್ಯೀಕರಣಕ್ಕೆ ಹೋಲಿಕೆ ಮಾಡಿದ ಸಂಸದೆ ನುಸ್ರತ್​ ಜಹಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fourteen =
Remember me
