ಮಲಪ್ಪುರಂ:ಭಾನುವಾರ ಸಂಜೆ (ಮೇ.7) ಕೇರಳದ ತನೂರ್​ನಲ್ಲಿ ನಡೆದ ಟೂರಿಸ್ಟ್​ ಬೋಟ್​ ದುರಂತದಲ್ಲಿ 22 ಮಂದಿ ಸಾವಿಗೀಡಾಗಿದ್ದಾರೆ. ಕೇರಳ ಪಾಲಿಗೆ ಅತ್ಯಂತ ದುರಂತದ ಘಟನೆಗಳಲ್ಲಿ ಇದು ಕೂಡ ಒಂದು. ಮೃತರಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳಾ ಪ್ರಯಾಣಿಕರು ಸೇರಿದ್ದಾರೆ.
ಇಬ್ಬರು ಪುರುಷರು ಸಹ ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬರ ಹೆಸರು ಸಬರುದ್ಧೀನ್. ಇವರು ತನೂರು ಪೊಲೀಸ್ ಠಾಣೆಯ ಬುದ್ಧಿವಂತ ಪೊಲೀಸ್​ ಅಧಿಕಾರಿ. ಮಲಪ್ಪುರಂ ಪೊಲೀಸ್​ ವರಿಷ್ಠಾಧಿಕಾರಿ ವಿಶೇಷ ದಳದ ಸದಸ್ಯರಾಗಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಸಬರುದ್ದೀನ್‌ ತಮ್ಮ ಶೌರ್ಯದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಒಮ್ಮೆ ಸಬರುದ್ದೀನ್​ ಅವರು ಹೇರ್​ ಕಟಿಂಗ್​ಗಾಗಿ ಕ್ಷೌರಿಕನ ಅಂಗಡಿಗೆ ಹೋಗಿದ್ದರು. ಇದೇ ಸಮಯಕ್ಕೆ ಠಾಣೆಯ ಆವರಣದ ಬಳಿ ಸ್ಕೂಟರ್ ದರೋಡೆ ಮಾಡಿದ ಸುದ್ದಿ ಬಂದಿತು. ಸಿಸಿಟಿವಿ ಪರಿಶೀಲಿಸಲಾದಾಗ ಆರೋಪಿಯನ್ನು ನೋಡಲಾಗಿತ್ತಾದರೂ ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಗುರುತು ಪತ್ತೆಯಾಗಿಲ್ಲ. ಈ ಸುದ್ದಿ ಕೇಳಿದ ಬಳಿಕ ಸಬರುದ್ದೀನ್ ಕ್ಷೌರದಂಗಡಿಯ ತನ್ನ ಸೀಟಿನಿಂದ ಜಿಗಿದು ಅವಸರದಲ್ಲಿ ಠಾಣೆಗೆ ಹೊರಟನು. ಅಪರಾಧಿಯನ್ನು ಹಿಡಿಯುವವರೆಗೂ ಕ್ಷೌರ ಮಾಡುವುದಿಲ್ಲ ಎಂದು ತನ್ನ ಸಹೋದ್ಯೋಗಿಗಳಿಗೆ ಶಪಥ ಮಾಡಿದರು.
ಇದನ್ನೂ ಓದಿ:ರಾಜ್ಯಕ್ಕೆ ಎದುರಾಗಲಿದೆ ನಾಯಕತ್ವ ಕೊರತೆ: ಹಲವು ಹಿರಿಯ ನಾಯಕರಿಗೆ ಇದು ಕೊನೆಯ ಚುನಾವಣೆ..
ಶಪಥ ಮಾಡಿದ ಎಂಟು ದಿನಗಳ ನಂತರ ಸಬರುದ್ದೀನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಸಲೇಶ್ ಅವರು ಸ್ಕೂಟರ್ ದರೋಡೆಕೋರನನ್ನು ಹಿಡಿದರು. ಇದಾದ ಬಳಿಕವೇ ಸಬರುದ್ಧೀನ್‌ ಕ್ಷೌರ ಮಾಡಲು ತೆರಳಿದ್ದರು. ಇದೀಗ ದೋಣಿ ದುರಂತದಲ್ಲಿ ಸಬರುದ್ಧೀನ್‌ ಸಾವಿಗೀಡಾಗಿದ್ದು ಸ್ಥಳೀಯ ಜನರು ಕಂಬನಿ ಮಿಡಿಯುತ್ತಿದ್ದಾರೆ.
ಮಲಪ್ಪುರಂ ಜಿಲ್ಲೆಯ ತಾನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಭಾನುವಾರ ಸಂಜೆ 7 ಘಂಟೆ ಸುಮಾರಿಗೆ ದೋಣಿ ದುರಂತ ಸಂಭವಿಸಿದೆ. ಬೋಟ್​ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನ ಬಂಧನವಾಗಿದೆ.(ಏಜೆನ್ಸೀಸ್​​)
ವೀರಶೈವ-ಲಿಂಗಾಯತರನ್ನು ಸೆಳೆಯುವ ಯತ್ನ ಫಲಿಸದು: ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಕಿಡಿ

3 ದಿನ 35 ಕೋಟಿ ರೂ.; ಬಾಯ್ಕಾಟ್​ಗೆ ಬಗ್ಗದ, ಬ್ಯಾನ್​ಗೆ ಜಗ್ಗದ ‘ದಿ ಕೇರಳ ಸ್ಟೋರಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
