ಮುಂಬೈ :ವಿವಾಹೇತರ ಸಂಬಂಧ ಹೊಂದಿದ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರ ಇನ್​ಕ್ರಿಮೆಂಟ್​ಅನ್ನು ಒಂದು ವರ್ಷದ ಮಟ್ಟಿಗೆ ಸಸ್ಪೆಂಡ್​ ಮಾಡಲಾಗಿದೆ. ಮುಂಬೈ ನಗರದ ನಾಗಪಡ ಪೊಲೀಸ್​ ಠಾಣೆಯಲ್ಲಿ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​(ಎಪಿಐ) ಆಗಿರುವ ಧನರಾಜ್​ ಪ್ರಭಾಲೆ ಎಂಬುವರು ಈ ಶಿಕ್ಷೆಗೆ ಒಳಗಾದ ಅಧಿಕಾರಿ.
ಮುಂಬೈ ಹೆಚ್ಚುವರಿ ಪೊಲೀಸ್​ ಕಮಿಷನರ್​ ಧ್ಯಾನೇಶ್ವರ್ ಚವನ್ ಹೊರಡಿಸಿರುವ ಆದೇಶದಲ್ಲಿ, ಕಳೆದ ಫೆಬ್ರವರಿಯಲ್ಲಿ, ವಿವಾಹಿತನಾದ ಎಪಿಐ ಪ್ರಭಾಲೆ ಫೇಸ್​ಬುಕ್​ನಲ್ಲಿ ಒಬ್ಬ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡು, ತದನಂತರ ಅವಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ವಯಸ್ಸಾದರೂ ಮದುವೆಯಾಗಿಲ್ಲವೆಂದು ಹೆತ್ತವರಿಂದಲೇ ಸಿನಿಮಾ ನಿರ್ದೇಶಕನ ಬರ್ಬರ ಹತ್ಯೆ- ದೇಹ ಪೀಸ್‌ ಪೀಸ್‌!
ಮಹಿಳೆಯು ಫೇಸ್​ಬುಕ್​ನಲ್ಲಿ ತನ್ನ ಕೇಟರಿಂಗ್ ಬಿಸಿನೆಸ್ ಬಗ್ಗೆ ಜಾಹೀರಾತು ಪ್ರಕಟಿಸಿದ್ದಳು. ಪ್ರಭಾಲೆ ಅವಳಿಗೆ ಬಿಸಿನೆಸ್​ ಸೆಟ್​ ಮಾಡಲು ಸಹಾಯ ಮಾಡುವುದಾಗಿ ತಿಳಿಸಿದ. ಇಬ್ಬರೂ ಭೇಟಿಯಾಗಲು ಆರಂಭಿಸಿದರು. ಈ ರೀತಿ ಬೆಳೆದ ಅವರ ಸಂಬಂಧ ಸ್ವಲ್ಪ ಸಮಯದ ನಂತರ ಕೆಟ್ಟಿದ್ದು, ಆ ಮಹಿಳೆ ಮೇಲಧಿಕಾರಿಗಳಿಗೆ ತನ್ನನ್ನು ಶೋಷಿಸಲಾಗಿದೆ ಎಂದು ದೂರು ನೀಡಿದಳು ಎನ್ನಲಾಗಿದೆ.
ಇಲಾಖಾ ತನಿಖೆಯಲ್ಲಿ, ಎಪಿಐ ಪ್ರಭಾಲೆ ಅಶಿಸ್ತಿನಿಂದ ವರ್ತಿಸಿದ್ದು, ಪೊಲೀಸ್ ಇಲಾಖೆಯ ವರ್ಚಸ್ಸನ್ನು ಹಾಳು ಮಾಡುವಂತೆ ನಡೆದುಕೊಂಡಿದ್ದಾನೆಂದು ನಿರ್ಣಯ ಮಾಡಲಾಗಿದೆ. ಇದಕ್ಕೆ ಶಿಕ್ಷೆಯಾಗಿ ಒಂದು ವರ್ಷ ಆತನ ಇನ್​ಕ್ರಿಮೆಂಟ್​ಅನ್ನು ಸಸ್ಪೆಂಡ್ ಮಾಡಲಾಗಿದೆ. ಪೊಲೀಸ್​ ಮೂಲಗಳ ಪ್ರಕಾರ, ಈ ರೀತಿಯ ಶಿಕ್ಷೆಯು ಪೊಲೀಸ್ ಸಿಬ್ಬಂದಿಯ ಬಡ್ತಿ ಮತ್ತು ಪದಕಗಳನ್ನು ಪಡೆಯುವ ಅರ್ಹತೆಯ ಮೇಲೆ ಪ್ರಭಾವ ಬೀರುವುದರಿಂದ ಭಾರೀ ಪ್ರಮಾಣದ್ದಾಗಿದೆ.(ಏಜೆನ್ಸೀಸ್)
ಬ್ಲ್ಯಾಕ್ ಫಂಗಸ್​ ಔಷಧಿ ಸೋಗಿನಲ್ಲಿ ಸೈಬರ್​ ಖದೀಮರ ಆಟ ಶುರು

ಮಹಾಮಾರಿಯಿಂದ ರಕ್ಷಣೆಗೆ ‘ಕರೊನಾ ದೇವಿ’ ವಿಗ್ರಹ ಪ್ರತಿಷ್ಠಾಪನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 9 =
Remember me
