ನವದೆಹಲಿ :ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್​ ಕುಮಾರ್​ ಅವರನ್ನು ನಿನ್ನೆ ಬೆಳಿಗ್ಗೆ ದೆಹಲಿಯ ಮಾಂಡೋಲಿ ಜೈಲಿನಿಂದ ತಿಹಾರ್​ ಜೈಲಿಗೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಕರ್ತವ್ಯನಿರತ ಪೊಲೀಸ್​ ಸಿಬ್ಬಂದಿಗಳು ಕುಮಾರ್​ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಪ್ರಸಂಗ ನಡೆದಿದೆ.
ಸ್ಪೆಷಲ್​ ಸೆಲ್​ ಪೊಲೀಸರು ಮತ್ತು ದೆಹಲಿ ಆರ್ಮಡ್​ ಪೊಲೀಸ್​ನ ಥರ್ಡ್​ ಬಟಾಲಿಯನ್ ಸಿಬ್ಬಂದಿಯನ್ನು ಸ್ಥಳಾಂತರದ ಸಮಯದಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಹೈ ರಿಸ್ಕ್​ ಖೈದಿಗಳೊಂದಿಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಕಳುಹಿಸುವ ಸಲುವಾಗಿ ಕೆಲವು ಸಿಬ್ಬಂದಿ ಫೋಟೋಗಳನ್ನು ತೆಗೆದುಕೊಂಡರು. ನಂತರ ಈ ಸಿಬ್ಬಂದಿಗಳು ಆ ಫೋಟೋಗಳನ್ನು ತಮ್ಮ ವಾಟ್ಸಾಪ್​ ಗ್ರೂಪ್​ಗಳಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಲು ಆರಂಭಿಸಿದ್ದು, ಫೋಟೋಗಳು ವೈರಲ್​ ಆದವು ಎನ್ನಲಾಗಿದೆ.
ಇದನ್ನೂ ಓದಿ:ತವರಿಗೆ ಬಂದ ಮಗಳು ಮಾಡಿದ ಕೆಲಸಕ್ಕೆ ಕುಟುಂಬವೇ ಶಾಕ್! ಮದುವೆಯಾಗಿ 9 ದಿನಕ್ಕೆ ನಡೆದೇಹೋಯಿತು ಘೋರ ದುರಂತ
ಹೀಗೆ ಆರೋಪಿ ಸುಶೀಲ್​ ಕುಮಾರ್​ರೊಂದಿಗೆ ಹಲವು ಪೊಲೀಸರು ಸೆಲ್ಫಿ ಮತ್ತು ಫೋಟೋ ಸೆಷನ್​ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂದಿದ್ದು, ಇದೀಗ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಮತ್ತೊಬ್ಬ ಕುಸ್ತಿಪಟು ಸಾಗರ್​ ಧನಕರ್​ ಕೊಲೆ ಆರೋಪದ ಮೇಲೆ ಸುಶೀಲ್ ಕುಮಾರ್​ರನ್ನು ಬಂಧಿಸಿದ್ದು, ಜುಲೈ 9 ರವರೆಗೆ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿಲು ದೆಹಲಿ ಕೋರ್ಟ್ ಆದೇಶಿಸಿದೆ.(ಏಜೆನ್ಸೀಸ್)
ನಾವು ಕ್ವಾರಂಟೇನ್​​ನಲ್ಲಿಲ್ಲ, ಬೀದಿಗಿಳಿದು ಹೋರಾಟ ನಡೆಸುತ್ತಿದ್ದೇವೆ: ನಿಖಿಲ್ ಕುಮಾರಸ್ವಾಮಿ

ವಿಸ್ಟಾಡೋಮ್​ ಕೋಚ್​ಗೆ ಚಾಲನೆ! ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯುತ್ತಿರುವ ಪ್ರಯಾಣಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 14 =
Remember me
