ಬೆಂಗಳೂರು:ಕರೊನಾ ಸೋಂಕು ತಡೆಯುವಲ್ಲಿ ಮಹತ್ವದ ಕಾಣಿಕೆ ನೀಡುತ್ತಿರುವ ಪೊಲೀಸರಿಗೆ ಕೋವಿಡ್-19 ಪರೀಕ್ಷಾ ವರದಿ ಕೈಸೇರುವುದು ವಿಳಂಬವಾಗುತ್ತಿದೆ. ಇದರ ಪರಿಣಾಮ ಠಾಣೆ ಮತ್ತು ಕುಟುಂಬದ ಸದಸ್ಯರಿಗೆ ತೊಂದರೆ ಉಂಟಾಗುತ್ತಿದ್ದು, ಖಾಸಗಿ ಲ್ಯಾಬ್​ಗಳ ಮೊರೆ ಹೋಗುತ್ತಿದ್ದಾರೆ.
ಜು.1ರಂದು ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದರೂ ವರದಿ ಜು.5ರಂದು ಕೈಸೇರಿದೆ. ಈ ವರದಿಯಲ್ಲಿ ಮಲ್ಲೇಶ್ವರ ಠಾಣೆಯ ಇಬ್ಬರಿಗೆ ಪಾಸಿಟಿವ್ ಬಂದಿದೆ. ವರದಿ ಬರುವುದು ಐದಾರು ದಿನ ತಡವಾಗಿದ್ದರಿಂದ ಇಷ್ಟೂ ದಿನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಠಾಣೆಗೂ ನಿರಂತರವಾಗಿ ಬಂದುಹೋಗಿದ್ದಲ್ಲದೆ ಹೊಯ್ಸಳ ಕರ್ತವ್ಯಕ್ಕೂ ನಿಯೋಜನೆಗೊಂಡಿದ್ದರು. ಸೋಂಕು ಇಟ್ಟುಕೊಂಡೇ ಕರ್ತವ್ಯಕ್ಕೆ ಹಾಜರಾಗಿದ್ದವರಿಂದ ಇನ್ನಷ್ಟು ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:ವಿಶ್ವಗುರು: ಆತ್ಮನಿರ್ಭರತೆಯ ಯಜ್ಞಕ್ಕೆ ನಾವೇ ಸಮಿತ್ತು!
ರಾಜಾಜಿನಗರ ಸಂಚಾರ ಠಾಣೆ ಬಂದ್:ರಾಜಾಜಿನಗರ ಸಂಚಾರ ಠಾಣೆಯ 54 ವರ್ಷದ ಮುಖ್ಯಪೇದೆಗೆ ಕರೊನಾ ಸೋಂಕು ತಗುಲಿರುವುದರಿಂದ ಠಾಣೆಯನ್ನು ಮುಚ್ಚಲಾಗಿದೆ. ಈ ಠಾಣೆಯ 30 ಸಿಬ್ಬಂದಿಗೆ ಸದ್ಯಕ್ಕೆ ಹೋಮ್ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.
ಮಲ್ಲೇಶ್ವರ ಠಾಣೆಯ ಹೊಯ್ಸಳ ವಾಹನ ಕರ್ತವ್ಯದಲ್ಲಿದ್ದ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಕರೊನಾ ದೃಢವಾಗುತ್ತಿದ್ದಂತೆ ಠಾಣೆ ಸೀಲ್​ಡೌನ್ ಮಾಡಲಾಗಿದೆ. ಜತೆಗೆ ಠಾಣೆ ಕರ್ತವ್ಯವನ್ನು ಎದುರುಗಡೆ ಇರುವ ಶಾಲೆ ಆವರಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಸೋಂಕಿತರ ಜತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಕಮಿಷನರೇಟ್​ನಲ್ಲಿ ಒಟ್ಟು 210 ಮಂದಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದು 39 ಠಾಣೆ ಸೀಲ್​ಡೌನ್ ಆಗಿವೆ. 50 ವರ್ಷ ಮೇಲ್ಪಟ್ಟವರು ಕರ್ತವ್ಯಕ್ಕೆ ಹಾಜರಾಗದಂತೆ ನಿರ್ದೇಶನ ನೀಡಲಾಗಿದೆ. ಕರೊನಾ ವರದಿ ಬರಲು ತಡವಾಗುತ್ತಿರುವುದರಿಂದಲೇ ಪೊಲೀಸರಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಅಸಮಾಧಾನ ಅಧಿಕಾರಿಗಳಿಂದಲೂ ವ್ಯಕ್ತವಾಗುತ್ತಿದೆ.
ಕಾಶಿ ವಿಶ್ವನಾಥನ ಭಕ್ತರಿಗೊಂದು ಸಿಹಿ ಸುದ್ದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
