ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ದಿನವೂ ಒಂದಿಲ್ಲೊಂದು ತಿರುವು ಪಡೆಯುತ್ತಲೇ ಇದೆ. ಈಗ ಆತ ನೇಣು ಹಾಕಿಕೊಳ್ಳಲು ಬಳಸಿದ್ದೇನು ಎಂಬ ಬಗ್ಗೆ ತನಿಖೆ ನಡೆದಿದೆ.
ಜೂನ್​ 14ರಂದು ಬಾಂದ್ರಾದ ಮನೆಯಲ್ಲಿ ಸುಶಾಂತ್​ ಸಿಂಗ್​ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಮನೆಗೆಲಸದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ದೇಹವನ್ನು ಕೆಳಗಿಳಿಸಿ ಬೆಡ್​ ಮೇಲೆ ಮಲಗಿಸಿದ್ದರು.
ಇದನ್ನೂ ಓದಿ;ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ ಸಂಸದೆ ಅನುಮಾನಕ್ಕೂ ಇದೆ ಸಾಕ್ಷ್ಯ
ಸುಶಾಂತ್​ ನೇಣು ಹಾಕಿಕೊಳ್ಳಲು ಕುರ್ತಾ ಬಳಸಿಕೊಂಡಿದ್ದರು. ಅದನ್ನು ಕತ್ತರಿಸಿ ದೇಹವನ್ನು ಕೆಳಗಿಸಲಾಗಿತ್ತು. ಈ ವೇಳೆ ಬೆಡ್​ ಮೇಲೆ ಮತ್ತೊಂದು ವಸ್ತು ಇರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಅದು ಬಾತ್​ರೂಮ್​ನ ನಿಲುವಂಗಿಗೆ ಸುತ್ತಿಕೊಳ್ಳುತ್ತಿದ್ದ ಬಟ್ಟೆಯ ಬೆಲ್ಟ್​ ಆಗಿತ್ತು. ಅದು ಎರಡು ತುಂಡಾಗಿತ್ತು.
ಸುಶಾಂತ್​ ನೇಣು ಹಾಕಿಕೊಳ್ಳಲು ಮೊದಲು ಬಟ್ಟೆಯ ಬೆಲ್ಟ್​ ಬಳಸಿದ್ದರು ಎಂಬುದು ಪೊಲೀಸರ ಅನುಮಾನ. ಅದು ಭಾರ ತಾಳದೆ ತುಂಡಾಗಿದೆ. ಅಲ್ಲಿಗೆ ಆತ್ಮಹತ್ಯೆಯ ಮೊದಲ ಯತ್ನ ಕೈಗೂಡಿಲ್ಲ. ಇಷ್ಟಕ್ಕೆ ಸುಶಾಂತ್​ ಸುಮ್ಮನಾಗಿದ್ದರೆ….! ಖಂಡಿತ ದುರಂತದ ಗಳಿಗೆಯಿಂದ ಪಾರಾಗಿರುತ್ತಿದ್ದರಾ…?
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ ರಜಪೂತ್​ ಹಾದಿ ತುಳಿದ 16 ವರ್ಷದ ಟಿಕ್​ಟಾಕ್​ ನಟಿಯ ದುರಂತ ಅಂತ್ಯ..!
ಇಷ್ಟಾದ ಬಳಿಕ ಸುಶಾಂತ್​ ಕಬೋಡ್​ರ್ನಲ್ಲಿದ್ದ ಬಟ್ಟೆಗಳನ್ನೆಲ್ಲ ತಡಕಾಡಿ ಕುರ್ತಾ ಎತ್ತಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಬೋರ್ಡ್​ನಲ್ಲಿದ್ದ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇಷ್ಟಕ್ಕೂ ಕುರ್ತಾದ ಬಟ್ಟೆ ಅವರ ದೇಹದ ಭಾರ ತಾಳಿಕೊಳ್ಳುವಷ್ಟು ಗಟ್ಟಿಯಾಗಿತ್ತಾ ಎಂಬುದನ್ನು ಪತ್ತೆ ಹಚ್ಚಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜತೆಗೆ, ಬಟ್ಟೆಯ ಬೆಲ್ಟ್​ ತುಂಡಾಗಿದ್ದೇಕೆ ಎಂಬುದನ್ನೂ ಪತ್ತೆ ಹಚ್ಚುತ್ತಿದ್ದಾರೆ. ಈ ಅಂಶಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
