ಹೈದರಾಬಾದ್​:ಫೇಸ್​ಬುಕ್​ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ಎಂಬ ಮೋಸದ ಬಲೆಯಲ್ಲಿ ಬೀಳುವಂತೆ ಮಾಡಿ, ಮದುವೆ ಮಾಡಿಕೊಂಡು ವಂಚಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ವಿರುದ್ಧವೇ ತಿರುಗಿಬಿದ್ದಿರುವ ಪತ್ನಿ, ಪೊಲೀಸರಿಗೆ ದೂರು ನೀಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಹೈದರಾಬಾದ್​ನ ಚಂದಾನಗರದ ನಿವಾಸಿ ವಿಜಯಭಾಸ್ಕರ್​ಗೆ ಆಂಧ್ರ ಪ್ರದೇಶದ ಪ್ರಕಾಶಂ ನಗರದ ನಿವಾಸಿ ಸೌಜನ್ಯ ಜತೆಯಲ್ಲಿ ವಿವಾಹ ನೇರವೇರಿತ್ತು. ಇಬ್ಬರು ವೈವಾಹಿಕ ಜೀವನ ಸಾಕ್ಷಿಯಾಗಿ ಮೂರು ವರ್ಷದ ಮಗನು ಸಹ ಇದ್ದನು. ಆದರೂ ತನ್ನ ಕೆಟ್ಟ ಚಾಳಿಯನ್ನು ಬಿಡದ ವಿಜಯಭಾಸ್ಕರ್​ ಫೇಸ್​ಬುಕ್​ ಮೂಲಕ ಯುವತಿಯರನ್ನು ಬಲೆ ಬೀಸುವ ಕೆಲಸವನ್ನು ಮುಂದುವರಿಸಿದ್ದ. ಅದರಲ್ಲೂ ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುವ ಆಂಧ್ರ ಪ್ರದೇಶದ ಯುವತಿಯರೇ ಆತನ ಟಾರ್ಗೆಟ್​ ಆಗಿದ್ದರು.
ಫೇಸ್​ಬುಕ್​ನಲ್ಲಿ ಪರಿಚಯ ಮಾಡಿಕೊಂಡು ಬಣ್ಣ ಬಣ್ಣದ ಮಾತುಗಳನ್ನಾಡಿ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುತ್ತಿದ್ದ. ತುಂಬಾ ಸಲುಗೆ ಬೆಳೆಸಿದ ಬಳಿಕ ಯುವತಿಯರನ್ನು ಬೆದರಿಸಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಗಂಡನ ಈ ಚಾಳಿ ಪತ್ನಿ ಸೌಜನ್ಯ ಗಮನಕ್ಕೆ ಬಂದಿತು. ಇತ್ತ ವಿಜಯಭಾಸ್ಕರ್​, ಸೌಜನ್ಯಗೆ ಡಿವೋರ್ಸ್​ ಕೊಟ್ಟು ತನ್ನ ಸೋದರಸಂಬಂಧಿಯನ್ನು ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದ. ಅಲ್ಲದೆ, ಪತ್ನಿಗೆ ಕಿರುಕುಳ ನೀಡಲು ಸಹ ಆರಂಭಿಸಿದ್ದ.
ಇದನ್ನೂ ಓದಿ:ತಂದೆಯವರು ನನ್ನ ತಮ್ಮ, ಅವನ ಪತ್ನಿಗೆ ಆಸ್ತಿ ಬರೆದಿದ್ದು ನನಗೇನೂ ಕೊಟ್ಟಿಲ್ಲ- ಕೇಸ್​ ಹಾಕಬಹುದಾ?
ಇತ್ತ ಗಂಡನ ನಡೆಯಿಂದ ಬೇಸತ್ತಿದ್ದ ಸೌಜನ್ಯ ಸ್ಥಳೀಯ ಠಾಣೆಗೆ ತೆರಳಿ ದೂರು ಸಹ ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ವಿಜಯಭಾಸ್ಕರನ ಒಂದೊಂದೆ ಮಹತ್ಕಾರ್ಯಗಳು ತೆರೆದುಕೊಳ್ಳುತ್ತಾ ಬಂತು. ಸುಮಾರು 6 ಯುವತಿಯರಿಗೆ ವಿಜಯಭಾಸ್ಕರ್​ ಧೋಖಾ ಮಾಡಿದ್ದಾನೆ. ಅಲ್ಲದೆ, ಅವರಿಗೆ ಭಾರಿ ಹಣವನ್ನು ಸಹ ಕಿತ್ತಿದ್ದಾನೆ.
ಇನ್ನು ಸೌಜನ್ಯ ಸಹ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮದುವೆಯಾಗಿ ನನ್ನ ಜೀವನವನ್ನೇ ಹಾಳು ಮಾಡಿದ. ಮದುವೆಯಾಗುವಾಗ 25 ಗ್ರಾಂ ಚಿನ್ನ, 15 ಲಕ್ಷ ರೂ. ವರದಕ್ಷಿಣೆಯನ್ನು ಪಡೆದಿದ್ದಾನೆ. ಇದೀಗ ನಮಗೆ ಮೂರು ವರ್ಷದ ಮಗು ಸಹ ಇದೆ. ಏನೇ ಆಗಲಿ ನನಗೆ ನ್ಯಾಯ ಸಿಗಬೇಕು ಎಂದು ಸೌಜನ್ಯ ಆಗ್ರಹಿಸಿದ್ದಾಳೆ.(ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + twelve =
Remember me
