ರಿಯಾಸಿ:ಜೂನ್.09ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಕಾರಣ, ಘಟನೆಯಲ್ಲಿ 41ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, 9 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದರು. ಈ ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ಪೈಕಿ ಒಬ್ಬನ ರೇಖಾಚಿತ್ರವನ್ನು ಇದೀಗ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ:ದರ್ಶನ್​​ಗೆ ಮತ್ತಷ್ಟು ಸಂಕಷ್ಟ; ರೇಣುಕಾ ಸ್ವಾಮಿ ಶವ ವಿಲೇವಾರಿಗೆ 30 ಲಕ್ಷ ರೂ. ಸುಪಾರಿ!
ಪಿಟಿಐ ವರದಿ ಪ್ರಕಾರ, ಮೂವರು ಉಗ್ರರ ಪೈಕಿ ಒಬ್ಬನ ರೇಖಾಚಿತ್ರವನ್ನು ಪ್ರಕಟಿಸಿರುವ ಜಮ್ಮು ಪೊಲೀಸರು, ಶಂಕಿತನ ಬಗ್ಗೆ ಅಗತ್ಯ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಯನ್ನು ಆಧರಿಸಿ ಭಯೋತ್ಪಾದಕನ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದೆ.
53 ಸೀಟ್​ವುಳ್ಳ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಇತರೆ ರಾಜ್ಯಗಳ ಯಾತ್ರಾರ್ಥಿಗಳು, ಉತ್ತರಪ್ರದೇಶದಿಂದ ಮಾತಾ ವೈಷ್ಣೋ ದೇವಿ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಈ ವೇಳೆ ಯಾತ್ರಾರ್ಥಿಗಳಿದ್ದ ಬಸ್​ನ ಗುರಿಯಾಗಿಸಿಕೊಂಡ ಉಗ್ರರ ಗುಂಪು, ಸಾರಿಗೆ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದರು. ನಿಯಂತ್ರಣ ಕಳೆದುಕೊಂಡ ಬಸ್​ ಕಮರಿಗೆ ಉರುಳಿಬಿದ್ದಿತು. ದುರ್ಘಟನೆಯಲ್ಲಿ 9 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದು, 41ಕ್ಕೂ ಅಧಿಕ ಮಂದಿ ಗಂಭೀರಗೊಂಡ ಬೆನ್ನಲ್ಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು,(ಏಜೆನ್ಸೀಸ್).
ದರ್ಶನ್​ನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ; ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ: ಮೃತನ ತಾಯಿ ಕಣ್ಣೀರು

300 ರೂ. ಮೌಲ್ಯದ ವಸ್ತುವಿಗೆ ಕೊಟ್ಟಿದ್ದು 6 ಕೋಟಿ ರೂ.! ವ್ಯಾಪಾರಿಯ ಮೋಸಕ್ಕೆ ಕಣ್ಣೀರಿಟ್ಟ ವಿದೇಶಿ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eleven =
Remember me
