ಉತ್ತರಾಖಂಡ:ಕಳೆದ ವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಧಿಕಾರಿಗಳು ಅಕ್ರಮ ಮದರಸಾವನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಸ್ಥಳೀಯ ಪ್ರದೇಶದಲ್ಲಿ ಪೊಲೀಸರ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದರು. ಭುಗಿಲೆದ್ದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ತವರು ಜಿಲ್ಲೆ ಮೈಸೂರಿಗೆ ಸಿಎಂ ಭರಪೂರ ಕೊಡುಗೆ; ಆರೋಗ್ಯ, ಶಿಕ್ಷಣ ರಂಗಕ್ಕೆ ಹೆಚ್ಚಿನ ಒತ್ತು
ಕೋಮುಗಲಭೆಯಲ್ಲಿ ಭಾಗಿಯಾದ ಆರೋಪಿಗಳ ಮನೆಗಳನ್ನು ಸದ್ಯ ಹಲ್ದ್ವಾನಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಇತ್ತೀಚೆಗೆ, ಸಿವಿಲ್ ನ್ಯಾಯಾಲಯವು ಆಪಾದಿತ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ಸೇರಿದಂತೆ ಒಂಬತ್ತು ಜನರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿತು.
#WATCH| Haldwani | The houses of Abdul Malik and his son Abdul Moeed, wanted in the Banbhulpura riots, are being attached in Banbhulpura. At present, police and administration teams including Harbans Singh SP City Haldwani, Sangeeta CO Lalkuan, Sachin Tehsildar Haldwani, DR…pic.twitter.com/9ImUtaR8A7
— ANI UP/Uttarakhand (@ANINewsUP)February 16, 2024

ಹಲ್ದ್ವಾನಿ ಜಿಲ್ಲಾಡಳಿತ ನಡೆಸಿದ ಅತಿಕ್ರಮಣ ಅಭಿಯಾನದಿಂದ ಫೆಬ್ರವರಿ 8ರಂದು ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಒಂಬತ್ತು ವ್ಯಕ್ತಿಗಳನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಈವರೆಗೆ 30 ಮಂದಿಯನ್ನು ಬಂಧಿಸಲಾಗಿದ್ದು, ಸಿಆರ್‌ಪಿಸಿಯ ಸೆಕ್ಷನ್ 82 ಮತ್ತು 83ರ ಅಡಿಯಲ್ಲಿ ಎಲ್ಲಾ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅನುಮತಿ ನೀಡಿದೆ. ಸಿವಿಲ್ ನ್ಯಾಯಾಲಯವು ಎಲ್ಲಾ ಒಂಬತ್ತು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಇದನ್ನೂ ಓದಿ:‘ಪಿಯುಸಿ ಪಠ್ಯಾಧಾರಿತ ರಂಗ ಪ್ರದರ್ಶನ ಮತ್ತು ಸಮಾರೋಪ’ ಸಮಾರಂಭ
ಹಿಂಸಾಚಾರದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಆಯುಕ್ತರು 15 ದಿನಗಳಲ್ಲಿ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).
IPL 2024: ಭಾರತದಲ್ಲಿ ಐಪಿಎಲ್ ನಡೆಯುವುದು ಬಹುತೇಕ ಡೌಟ್? ಈ ಬಗ್ಗೆ ಅಧ್ಯಕ್ಷರು ಹೇಳಿದ್ದಿಷ್ಟು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen − six =
Remember me
