ನವದೆಹಲಿ:ಜನನಿಬಿಡ ಪ್ರದೇಶಗಳಲ್ಲಿ ಕೆಲವು ಪುಂಡರು ಅಪಾಯಕಾರಿ ಸ್ಟಂಟ್​ಗಳನ್ನು ಮಾಡುತ್ತ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುವ ಹಲವು ನಿದರ್ಶನಗಳು ನಮ್ಮ ಕಣ್ಣು ಮುಂದಿದೆ. ಈ ನಿಟ್ಟಿನಲ್ಲಿ ಪೊಲೀಸ್​ ಇಲಾಖೆಯೂ ನಾನಾ ರೀತಿಯ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗದಿರುವುದು ಬೇಸರದ ಸಂಗತಿ.
ಇದೀಗ ಘಟನೆಯೊಂದರಲ್ಲಿ ಇಬ್ಬರು ಯುವಕರು ಪೊಲೀಸ್​ ಚೌಕಿ ಮುಂಭಾಗದಲ್ಲೇ ಅಪಾಯಕಾರಿ ಬೈಕ್​ ಸ್ಟಂಟ್​ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕ್ರಮ ಜರುಗಿಸಿರುವ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕರಿಬ್ಬರು ವೇಗವಾಗಿ ಬೈಕ್​ ಓಡಿಸಿಕೊಂಡು ಬರುತ್ತಿರುವುದು ಕಂಡು ಬರುತ್ತದೆ. ಪೊಲೀಸ್​ ಚೌಕಿ ಕಂಡೊಡನೆ ಸವಾರ ಮುಂಬದಿ ಬ್ರೇಕ್​ ಹಿಡಿದು ಸ್ಟಾಪಿ (ಬ್ಯಾಕ್​ ವೀಲಿಂಗ್​) ಮಾಡುತ್ತಿರುವುದು ಕಂಡು ಬಡುತ್ತದೆ. ಈ ವಿಡಿಯೋವನ್ನು ಮತ್ತೊಂದು ಬೈಕಿನಲ್ಲಿ ಬರುತ್ತಿದ್ದ ಆತನ ಸ್ನೇಹಿತರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದರು.
A video was in circulation wherein a motorcycle stunt was being performed.#DelhiPoliceidentified the accused, arrested him and took legal action. He operates an Instagram account and uploads stunt videos for the sake of popularity.@DCPWestDelhiAppeal: Please drive/ride safe.pic.twitter.com/Q0eMysZicY
ಇದನ್ನೂ ಓದಿ:OMG-2 ಖ್ಯಾತಿಯ ನಟ ಪಂಕಜ್​ ತ್ರಿಪಾಠಿಗೆ ಪಿತೃವಿಯೋಗ
ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು. ಪೊಲೀಸ್​ ಚೌಕಿ ಮುಂಭಾಗದಲ್ಲೇ ಈ ರೀತಿ ಮಾಡಿದರೆ ಏನು ಅರ್ಥ ಎಂದು ಹಲವರು ಪ್ರಶ್ನಿಸಿದ್ದರು. ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಯುವಕನ ವಿರುದ್ಧ ತನಿಖೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಅಪ್ಲೋಡ್​ ಮಾಡಿ ಪುಂಡರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಪೊಲೀಸರ ಕಾರ್ಯವನ್ನು ಮೆಚ್ಚಿಕೊಂಡಿರುವ ನೆಟ್ಟಿಗರು ಈ ರೀತಿ ಮಾಡುವ ಪುಂಡರನ್ನು ಜೈಲಿಗೆ ಅಟ್ಟಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅವನ ಲೈಸೆನ್ಸ್​ ರದ್ದುಪಡಿಸಿ ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಎಂದು ಹಲವರು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
