ಉತ್ತರಪ್ರದೇಶ:ಸೆ.15 ರಂದು 17 ವರ್ಷದ ಹುಡುಗಿಯೊಬ್ಬಳ ದುಪಟ್ಟಾ ಎಳೆದ ಕಾರಣ ಆಕೆ ಸೈಕಲ್‌ನಿಂದ ಬಿದ್ದು, ಸಾವನ್ನಪ್ಪಿದ ದಾರುಣ ಘಟನೆ ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಅಧಿಕಾರ ಇದ್ದಾಗೆಲ್ಲ ಬಿಎಸ್​​ವೈಗೆ ತೊಂದ್ರೆ ಕೊಟ್ರು, ಈಗ ಅಧಿಕಾರ ಬೇಕೆಂದಾದಾಗ ಅಡ್ಡಾಡಪ್ಪ ಅಂತಿದಾರೆ: ಅಬಕಾರಿ ಸಚಿವ
ಹುಡುಗಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿಗಳು, ಘಟನೆ ನಡೆದ ಬಳಿಕ ವಿಚಾರಣೆ ವೇಳೆ ಪೊಲೀಸರಿಂದ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಯುಪಿ ಪೊಲೀಸರು, ಎನ್‌ಕೌಂಟರ್‌ನಡಿ ಆರೋಪಿ ಶಹಬಾಜ್ ಮತ್ತು ಫೈಸಲ್ ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯ ವಿವರ:17 ವರ್ಷದ ಹುಡುಗಿ ಎಂದಿನಂತೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳಾದ ಶಹಬಾಜ್ ಮತ್ತು ಆತನ ಸಹೋದರ ಅರ್ಬಾಜ್, ಇಬ್ಬರೂ ಆಕೆಯನ್ನು ಅಡ್ಡಗಟ್ಟಿ, ಚುಡಾಯಿಸಿದ್ದಾರೆ. ಬೈಕ್​ನಲ್ಲಿ ಹೋಗುತ್ತಿದ್ದ ಪುಂಡರು ಹುಡುಗಿಯ ದುಪಟ್ಟಾವನ್ನು ಎಳೆದಿದ್ದಾರೆ.
ಇದನ್ನೂ ಓದಿ:VIDEO | ಪೊಲೀಸ್ ಸಮವಸ್ತ್ರವನ್ನು ಧರಿಸಿ ಪ್ರೀ ವೆಡ್ಡಿಂಗ್ ಫೋಟೋಶೂಟ್​​​ ಮಾಡಿಸಿದ ದಂಪತಿ!
ತನ್ನ ದುಪಟ್ಟಾವನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಿದ ಹುಡುಗಿ, ಎಡವಿ ನೆಲಕ್ಕೆ ಬಿದ್ದಿದ್ದಾಳೆ. ಇದೇ ವೇಳೆ ಹಿಂದಿನಿಂದ ಬಂದ ಫೈಸಲ್ ಎಂದು ಗುರುತಿಸಲಾದ ಮತ್ತೊಬ್ಬ ಯುವಕನು ಆಕೆಯ ತಲೆಯ ಮೇಲೆ ಬೈಕ್ ಹತ್ತಿಸಿದ ಪರಿಣಾಮ, ಹುಡುಗಿ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
ಮತ್ತೊಂದು ಮೈಲಿಗಲ್ಲು ಸಾಧಿಸಿದ ಅನುಷ್ಕಾ ಶೆಟ್ಟಿ ಸಿನಿಮಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
