ಲಖನೌ:ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್​ ದೈಹಿಕ ತರಬೇತಿ ಕಾಲೇಜಿನ ಬೋಧಕನ ವಿರುದ್ಧ ಭಾನುವಾರ ಎಫ್​ಐಆರ್​ ದಾಖಲಾಗಿದೆ.
ಆರೋಪಿಯನ್ನು ಉಮೇಶ್​ ಶರ್ಮಾ ಎಂದು ಗುರುತಿಸಲಾಗಿದೆ. ಆರ್ಜೋ ಪವಾರ್ (30) ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಹಾಗೂ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ಬುಲಂದ್​ಶಹರ್​ನ ಅನೂಪ್​ಶಹರ್​ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ಜೋ ಪವಾರ್​ ಜನವರಿ 1ರಂದು ತಾವಿದ್ದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಇದನ್ನೂ ಓದಿರಿ:ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!
ಎಸ್​ಐ ಸಾವಿಗೀಡಾದ ಮೂರು ವಾರಗಳ ಬಳಿಕ ಸಹೋದರ ಮನೀಶ್​ ಎಂಬುವರು ಉಮೇಶ್​ ಶರ್ಮಾ ವಿರುದ್ಧ ದೂರು ದಾಖಲಿಸಿದ್ದರು. ಮೊರಾದಾಬಾದ್​ ಪೊಲೀಸ್​ ಟ್ರೈನಿಂಗ್​ ಕಾಲೇಜಿನಲ್ಲಿ ಬೋಧನಾಗಿರುವ ಉಮೇಶ್​, ಸಹೋದರಿಯನ್ನು ಆತ್ಮಹತ್ಯೆಗೆ ಬಲವಂತ ಮಾಡಿದ್ದಾರೆಂದು ಮನೀಶ್​ ಆರೋಪಿಸಿದ್ದರು. ಆರ್ಜೋ ಆತ್ಮಹತ್ಯೆ ಸುದ್ದಿ ಕೇಳಿ ತಾಯಿಗೆ ಬಿಪಿ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಇಷ್ಟು ದಿನಗಳವರೆಗೆ ಪ್ರಕರಣ ಸಂಬಂಧ ಯಾವುದೇ ದೂರು ನೀಡಲಾಗಿರಲಿಲ್ಲ ಎಂದು ಮನೀಶ್​ ಸ್ಪಷ್ಟನೆ ನೀಡಿದ್ದರು.
ಇದೀಗ ಉಮೇಶ್​ ವಿರುದ್ಧ ಐಪಿಸಿ ಸೆಕ್ಸನ್​ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 384 (ಬಲಾತ್ಕಾರವಾಗಿ ಪಡೆಯುವುದು) ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ ಎಂದು ಬುಲಂದ್​ಶಹರ್​ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಕುಮಾರ್​ ಸಿಂಗ್​ ಹೇಳಿದ್ದಾರೆ.
ಡಿಸೆಂಬರ್​ 29ರಂದು ಉಮೇಶ್​, ಬುಲಂದ್​ಶಹರ್​ನ ತಮ್ಮ ಗ್ರಾಮಕ್ಕೆ ಆರ್ಜೋರನ್ನು ಆಹ್ವಾನಿಸಿದ್ದರು. ಈ ವೇಳೆ ಟೀನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಅಲ್ಲದೆ, ತನ್ನ ಕೃತ್ಯದ ವಿಡಿಯೋವನ್ನು ಮಾಡಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ. ಇದರ ನಡುವೆ ಆರ್ಜೋ ಮದುವೆ ಸಿದ್ಧವಾದಾಗ ಮದುವೆ ರದ್ದು ಮಾಡುವಂತೆ ಒತ್ತಾಯಿಸುತ್ತಿದ್ದ. ಮದುವೆ ರದ್ದು ಮಾಡದಿದ್ದರೆ ಅಶ್ಲೀಲ ಫೋಟೋಗಳನ್ನು ಹರಿಬಿಡುವುದಾಗಿ ಹೆದರಿಸುತ್ತಿದ್ದ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿರಿ:ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?
ತನಿಖೆ ನಡೆಯುತ್ತಿದ್ದ ಉಮೇಶ್​ ವಿರುದ್ಧದ ಆರೋಪ ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಬುಲಂದ್​ಶಹರ್​ ಎಸ್​ಎಸ್​ಪಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಏನು?ಮೂಲತಃ ಶಾಮ್ಲಿ ಜಿಲ್ಲೆಯ ಆರ್ಜೋ 2015ರಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ನೇಮಕವಾದರು. ಬುಲಂದ್​ಶಹರ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಜನವರಿ 1ರಂದು ಮಾಲಕಿ ಆರ್ಜೋ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ಮಾಲಕಿ ಮನೆಯ ಬಳಿ ಹೋಗಿ ನೋಡಿದಾಗ ಒಳಗಡೆಯಿಂದ ಲಾಕ್​ ಮಾಡಿರುವುದು ತಿಳಿಯುತ್ತದೆ. ಬಳಿಕ ಬಾಗಿಲು ಬಡಿದಾಗಲೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ಲಾಸ್​ ವೆಂಟಿಲೇಟರ್​ ಮೂಲಕ ಒಳ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆರ್ಜೋ ಶವ ಕೋಣೆಯಲ್ಲಿ ಪತ್ತೆಯಾಗುತ್ತದೆ. ಈ ವೇಳೆ ಡೆತ್​ನೋಟ್​ ಸಹ ಪತ್ತೆಯಾಗಿತ್ತು.(ಏಜೆನ್ಸೀಸ್​)
ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ನಿನ್ನ ಆರೋಗ್ಯ ಸರಿಯಿಲ್ಲ…ನಾನು 2ನೇ ಮದುವೆಯಾಗ್ತೀನಿ ಎಂದ ಎರಡು ಮಕ್ಕಳ ತಂದೆಯ ಗತಿ ಏನಾಯ್ತು?

ಎಸ್​ಐಗೆ ಸಾವಿನ ದಾರಿ ತೋರಿದ ಬ್ಯೂಟಿಷಿಯನ್​ ಬಂಧನ: ಸುಂದರಿಯ ಹೈಡ್ರಾಮಕ್ಕೆ ಬೆದರಿ ನೇಣಿಗೆ ಶರಣು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
