ಹೈದರಾಬಾದ್:ಇಸ್ಲಾಂ ಧರ್ಮದಲ್ಲಿ ಮಹತ್ವದ ತಿಂಗಳು ಎಂದರೆ ಅದು ರಂಜಾನ್ ಎಂದು ಹೇಳಬಹುದಾಗಿದೆ. ಮುಸ್ಲಿಂ ಭಾಂದವರು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪ್ರಾರ್ಥನೆ ಸಲ್ಲಿಸಿ ದಾನ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇದೀಗ ರಂಜಾನ್ ಪ್ರಯುಕ್ತ ಹಂಚಲಾಗುತ್ತಿದ್ದ ಉಚಿತ ಹಲೀಮ್ ಪಡೆಯಲು ನೂರಾರು ಜನ ಜಮಾಯಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಚಾರ್ಜ್​ ಮಾಡಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ಮಾಲಕ್​ಪೇಟೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
#WATCH| Hyderabad, Telangana: Hundreds of people gathered outside the Azebo Hotel in Malakpet after the restaurant announced free Haleem on the occasion of the first day of Ramzan. The hotel management was unable to control the crowd, and later the police had to disperse the…pic.twitter.com/Q5bFOmn9WO
ಇದನ್ನೂ ಓದಿ:ಪಂತ್ ಆಗಮನದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಶಾಕ್​; ಟೂರ್ನಿಯಿಂದ ಹಿಂದೆ ಸರಿದ ಪ್ರಮುಖ ಆಟಗಾರ
ರಂಜಾನ್ ಪ್ರಯುಕ್ತ ಮಾಲಕ್‌ಪೇಟೆಯಲ್ಲಿರುವ ಹೋಟೆಲ್‌ವೊಂದು ಉಚಿತ ಹಲೀಮ್ (ಮಾಂಸ, ಗೋಧಿ ಇತರ ಸಾಮಾಗ್ರಿಗಳಿಂದ ತಯಾರಿಸಿದ ಖಾದ್ಯ) ವಿತರಿಸುವುದಾಗಿ ಘೋಷಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ಹಲವಾರು ಜನರು ಹೋಟೆಲ್‌ ಬಳಿ ಬಂದಿದ್ದು, ನೂಕು ನುಗ್ಗಲು ಉಂಟಾಗಿತ್ತು. ಜನರ ದಟ್ಟಣೆಯಿಂದ ಹೋಟೆಲ್‌ ಸಿಬ್ಬಂದಿ ಹೈರಾಣಾಗಿದ್ದು, ಆಹಾರ ವಿತರಿಸುವುದನ್ನು ತಕ್ಷಣ ನಿಲ್ಲಿಸಿದರು. ಗುಂಪನ್ನು ಚದುರಿಸಲು ಕೊನೆಗೆ ಪೊಲೀಸರೇ ಮಧ್ಯ ಪ್ರವೇಶಿಸಬೇಕಾಯಿತು. ಇದರಿಂದ ಕೆಲಕಾಲ ಮಾಲಕ್​ಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೋಟೆಲ್ ಹೊರಗೆ ನೆರೆದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಉಚಿತವಾಗಿ ಆಹಾರ ವಿತರಿಸುತ್ತಿರುವುದಾಗಿ ಹೋಟೆಲ್​​ನವರು ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಒಂದು ವೇಳೆ ಅವರು ನಮಗೆ ಮಾಹಿತಿ ನೀಡಿದ್ದರೆ ಜನ ಹಾಗೂ ಸಂಚಾರ ದಟ್ಟನೆ ಉಂಟಾಗದಂತೆ ಅಗತ್ಯ ಕ್ರಮಕೈಗೊಳ್ಳುತ್ತಿದ್ದೆವು.  ಮಾಹಿತಿ ನೀಡದೆ ಸಂಚಾರ ದಟ್ಟಣೆಗೆ ಕಾರಣವಾಗಿದ್ದರಿಂದ ಹೋಟೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
VIDEO | Police resorted to lathicharge to disperse the crowd that thronged a restaurant in Hyderabad's Malakpet allegedly to get free Haleem earlier today.The restaurant management called the police after the crowd went out of control, leading to a massive traffic jam in the…pic.twitter.com/dBRnLO9sbd
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × four =
Remember me
