ತಿರುವನಂತಪುರಂ:ಬೆತ್ತಲೆ ವಿಡಿಯೋ ರೆಕಾರ್ಡ್​ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಏಳು ವರ್ಷಗಳ ಕಾಲ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೊಲೀಸ್​ ಅಧಿಕಾರಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಚನಿ ಮೂಲದ ಸಬು ಪನಿಕ್ಕರ್​ (48) ಎಂದು ಗುರುತಿಸಲಾಗಿದೆ. ಈತ ಕೇರಳದ ವಿಜಿಲೆನ್ಸ್ ಗ್ರೇಡ್​ ಎಸ್​ಸಿಪಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ. 40 ವರ್ಷದ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಅರುವಿಕ್ಕರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯ ಬೆತ್ತಲೆ ವಿಡಿಯೋವನ್ನು ಆರೋಪಿ ರೆಕಾರ್ಡ್​ ಮಾಡಿಟ್ಟುಕೊಂಡಿದ್ದ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಹೆದರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸುಮಾರು 7 ವರ್ಷಗಳ ಕಾಲ ಮಹಿಳೆಯನ್ನು ಆರೋಪಿ ತನ್ನ ಕಾಮತೃಷೆಗೆ ದುರ್ಬಳಕೆ ಮಾಡಿಕೊಂಡಿದ್ದಾನೆ.
ಆರೋಪಿ ವಿಡಿಯೋ ಕ್ಲಿಪ್ ಅನ್ನು ಹರಿಬಿಟ್ಟ ಬಳಿಕ ಮಹಿಳೆ ಇತ್ತೀಚೆಗೆ ಅರುವಿಕ್ಕರ ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೋ ಹರಿಬಿಟ್ಟ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.(ಏಜೆನ್ಸೀಸ್​)
ಮಹಿಳೆಯ ಕೈ ಮೇಲೆ ಬೆಳೆದ ಬದಲಿ ಮೂಗಿನ ಕಸಿ ಚಿಕಿತ್ಸೆ ಯಶಸ್ವಿ! ವೈದ್ಯಲೋಕದ ಚಮತ್ಕಾರವಿದು…

ಥಾಯ್ಲೆಂಡ್ ಪ್ರವಾಸದಲ್ಲಿ ಮೇಘನಾ; ಸದ್ದು ಮಾಡುತ್ತಿವೆ ಹಾಟ್ ಫೋಟೋಗಳು!

ಕಲೆಕ್ಷನ್​ನಲ್ಲಿ ‘ಪುಷ್ಪ’ ದಾಖಲೆಯನ್ನು ಹಿಂದಿಕ್ಕಿದ ‘ಕಾಂತಾರ’ …

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 15 =
Remember me
