ಲಖನೌ:ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ ಹಾಲಿನ ಪಾಕೆಟ್​ಗಳನ್ನು ಪೊಲೀಸ್​ ಸಿಬ್ಬಂದಿಯೊಬ್ಬ ಕಳ್ಳತನ ಮಾಡಿದ್ದಾರೆ. ಇದು ಅಂಗಡಿ ಮುಂದೆ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.
ವಿಡಿಯೋದಲ್ಲಿ ಏನಿದೆ?: ಪೊಲೀಸ್​ ಗಸ್ತು ವಾಹನವನ್ನು ನಿಲ್ಲಿಸಿ, ಸಮೀಪದ ಅಂಗಡಿಯೊಂದರ ಮುಂದೆ ಜೋಡಿಸಲಾಗಿದ್ದ ಬಾಕ್ಸ್​ಗಳಿಂದ ಹಾಲಿನ ಪಾಕೆಟ್​ಗಳನ್ನು ಕದ್ದುಕೊಂಡು ವಾಹನ ಒಳಗೆ ಇಡುತ್ತಾರೆ. ವಾಹನದೊಳಗೆ ಮತ್ತೊಬ್ಬ ಸಿಬ್ಬಂದಿ ಇದ್ದಂತೆ ಕಾಣುತ್ತದೆ.
ಜನವರಿ 19ರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಕಳ್ಳತನ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಗಾದೆ ಮಾತಿಗೆ ನಿಜವಾಗಿಯೂ ಪೂರಕವಾಗಿದೆ.(ಏಜೆನ್ಸೀಸ್​)
#WATCHPoliceman seen stealing packets of milk in Noida, Uttar Pradesh, yesterday. (Source: CCTV footage)pic.twitter.com/elszjwbyA1— ANI UP/Uttarakhand (@ANINewsUP)January 20, 2020
#WATCHPoliceman seen stealing packets of milk in Noida, Uttar Pradesh, yesterday. (Source: CCTV footage)pic.twitter.com/elszjwbyA1
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − nine =
Remember me
