ಕೊತ್ವಾಲಿ:ಕುಡಿದ ಮತ್ತಿನಲ್ಲಿದ್ದವನಿಗೆ ಪೊಲೀಸ್ 38 ಬಾರಿ ಶೂನಿಂದ ಹೊಡೆದ ಘಟನೆ ಉತ್ತರ ಪ್ರದೇಶದ ಕೊತ್ವಾಲಿ ಎಂಬಲ್ಲಿ ನಡೆದಿದೆ.ಇದನ್ನೂ ಓದಿ:ಟೊಮ್ಯಾಟೋ ತಿನ್ನುವುದನ್ನು ಬಿಟ್ಟರೆ ಬೆಲೆ ಕಡಿಮೆಯಾಗುತ್ತದೆ ಎಂದ ಯುಪಿ ಸಚಿವೆಹಲ್ಲೆ ನಡೆಸಿದ ಕಾನ್ಸ್‌ಟೇಬಲ್​​ನನ್ನು ದಿನೇಶ್ ಎಂದು ಗುರುತಿಸಲಾಗಿದ್ದು, ಆತ ಕೆಲವು ವಸ್ತುಗಳನ್ನು ಖರೀದಿಸಲು ಸಿವಿಲ್​ ಡ್ರೆಸ್​​ನಲ್ಲಿ ಹೋಗಿದ್ದರು. ಈ ವೇಳೆ ಮಾರುಕಟ್ಟೆಯಲ್ಲಿ ಪಾನಮತ್ತನಾಗಿದ್ದ ಯುವಕನೊಬ್ಬ ನಶೆಯಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ. ಅಲ್ಲದೇ, ಬಲವಂತವಾಗಿ ಅಂಗಡಿಗಳಿಗೆ ನುಗ್ಗಿ ಉಚಿತವಾಗಿ ತಂಪು ಪಾನೀಯ ಸೇವಿಸುತ್ತಿದ್ದ. ಕೂಡಲೇ ಪೇದೆಯನ್ನು ನೋಡಿದ ಜನರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.ಇದಾದ ನಂತರ ಕಾನ್ಸ್‌ಟೇಬಲ್ ಯುವಕನಿಗೆ ಗಲಾಟೆ ಮಾಡದಂತೆ ತಡೆಯಲು ಮುಂದಾದಾಗ, ಆತ ಹಲ್ಲೆಗೆ ಯತ್ನಿಸಿದ್ದಾನೆ. ಇದಾದ ನಂತರ ಕಾನ್ಸ್‌ಟೇಬಲ್ ಶೂ ತೆಗೆದು ಯುವಕನಿಗೆ ಥಳಿಸಲು ಆರಂಭಿಸಿದ್ದು, ನಾಲ್ಕು ನಿಮಿಷ 38 ಸೆಕೆಂಡುಗಳಲ್ಲಿ ಕಾನ್ಸ್‌ಟೇಬಲ್ ಮಾದಕ ವ್ಯಸನಿ ಯುವಕನಿಗೆ 38ಕ್ಕೂ ಹೆಚ್ಚು ಬಾರಿ ಶೂಗಳಿಂದ ಹೊಡೆದಿದ್ದಾನೆ. ಬಳಿಕ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಶ್ಚಿಮದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದುರ್ಗೇಶ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಹಲ್ಲೆ ನಡೆಸಿದ ಕಾನ್‌ಸ್ಟೆಬಲ್‌ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + twelve =
Remember me
