ನವದೆಹಲಿ:ದೇಶದ ಗಡಿಯಲ್ಲಿ ಉಗ್ರರ ಹಾವಳಿಯಾದರೆ ಇನ್ನೊಂದೆಡೆ ದೇಶದ ಒಳಗೆ ನಕ್ಸಲರ ದಾಳಿ ಪ್ರಾರಂಭವಾಗಿದೆ. ಲಾಕ್​ಡೌನ್​ ನಡುವೆಯೂ ನಕ್ಸಲರು, ಉಗ್ರರ ಉಪಟಳ ಮಿತಿಮೀರುತ್ತಿದೆ.
ಇದನ್ನೂ ಓದಿ:ಸಿಗರೇಟ್ ವ್ಯಾಪಾರಕ್ಕೆ ಅವಕಾಶದ ಆಮಿಷ: ಸಿಸಿಬಿ ಎಸಿಪಿಗೆ 62 ಲಕ್ಷ ರೂ. ಲಂಚ
ಛತ್ತೀಸ್​ಗಡ​ದ ರಾಜನಂದಗಾಂವ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನಚಕಮಕಿಯಲ್ಲಿ ಓರ್ವ ಸಬ್​ ಇನ್ಸ್​ಪೆಕ್ಟರ್​ ಮೃತಪಟ್ಟಿದ್ದಾರೆ. ಹಾಗೇ ನಾಲ್ವರು ಮಾವೋವಾದಿಗಳನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ.
ಮನ್ಪುರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪರೋಧೋನಿ ಗ್ರಾಮದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ದಾಳಿ-ಪ್ರತಿದಾಳಿ ನಡೆದಿತ್ತು.
ಇದನ್ನೂ ಓದಿ:ಸಂಪಾದಕೀಯ| ಸೂಕ್ತ ಎಚ್ಚರಿಕೆ ಅಗತ್ಯ; ಅವಘಡಗಳನ್ನು ತಪ್ಪಿಸಬೇಕಿದೆ
ಗುಂಡಿನ ದಾಳಿಯಲ್ಲಿ ಸತ್ತ ನಾಲ್ವರು ನಕ್ಸಲರ ಮೃತದೇಹಗಳನ್ನು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2009ರ ಜುಲೈ 12ರಂದು ಇದೇ ಸ್ಥಳದಲ್ಲಿ ಮಾವೋವಾದಿಗಳ ದಾಳಿಗೆ 29 ಪೊಲೀಸರು ಸಾವನ್ನಪ್ಪಿದ್ದರು. (ಏಜೆನ್ಸೀಸ್​)
40 ಲಕ್ಷದತ್ತ ಕರೊನಾ ದಾಪುಗಾಲು: ವಿಶ್ವದಲ್ಲಿ ಹೆಚ್ಚುತ್ತಲೇ ಇದೆ ಸೋಂಕು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 + 20 =
Remember me
