ಕಾನ್ಪುರ: ಪೊಲೀಸ್​ ಪೇದೆಯೋರ್ವರು ಕಾನ್ಪುರದಿಂದ ಜಬಲ್​ಪುರಕ್ಕೆ ಬರೋಬ್ಬರಿ 450 ಕಿ.ಮೀ.ದೂರ ನಡೆದುಕೊಂಡೇ ಸಾಗಿದ ಘಟನೆ ನಡೆದಿದೆ.
ಕಾನ್ಪುರದ ಭೌತಿ ನಿವಾಸಿಯಾಗಿರುವ ಪೊಲೀಸ್​ ಪೇದೆ ಆನಂದ್ ಪಾಂಡೆ ಜಬಲ್​ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿಗೆ ಅನಾರೋಗ್ಯವಿದ್ದುದರಿಂದ ಮಾ.20ರಂದು ಜಬಲ್​ಪುರದಿಂದ ಕಾನ್ಪುರಕ್ಕೆ ಆಗಮಿಸಿದ್ದರು. ಆದರೆ ಬಳಿಕ ಮಾ.25ರಿಂದ ಲಾಕ್​ಡೌನ್​ ಆಗಿದ್ದರಿಂದ ವಾಪಸ್​ ಹೋಗಲು ಕಷ್ಟಪಡುವಂತಾಯಿತು. ಯಾವುದೇ ವಾಹನಗಳೂ ಇರಲಿಲ್ಲ. ಆದರೆ ಕರ್ತವ್ಯಕ್ಕೆ ಹಾಜರಾಗಲೇಬೇಕಿತ್ತು. ಮಾ.30ರಂದು ಕಾನ್ಪುರದಿಂದ ನಡೆದುಕೊಂಡೇ ಹೊರಟ ಆನಂದ್​ ಅವರು ಮೂರು ದಿನಗಳಲ್ಲಿ ಜಬಲ್​ಪುರ ಸೇರಿದರು.
ಅಷ್ಟು ದೂರ ನಡೆದುಕೊಂಡು ಬಂದು ಕರ್ತವ್ಯಕ್ಕೆ ಹಾಜರಾದ ಆನಂದ್​ ಪಾಂಡೆಯವರನ್ನು ಜಬಲ್​​ಪುರ ಠಾಣೆಯ ಅಧಿಕಾರಿ ಮತ್ತು ಎಲ್ಲ ಸಿಬ್ಬಂದಿ ಶ್ಲಾಘಿಸಿದ್ದಾರೆ. ಸದ್ಯ ಪಾಂಡೆ, ಘಂಟಾಗಡ್​ ಚೌಕ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eighteen =
Remember me
