ತಿರುವನಂತಪುರ: ಕೇರಳ ಎಂಜಿನಿಯರಿಂಗ್ ಆರ್ಕಿಟೆಕ್ಚರ್ ಮೆಡಿಕಲ್ (ಕೆಇಎಎಂ) ಪ್ರವೇಶ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಪಾಲಕರು ಶಾಲಾ ಆವರಣದಲ್ಲಿ ಜಮಾಯಿಸಿ ಸಾಮಾಜಿಕ ಅಂತರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ 400 ಕ್ಕೂ ಹೆಚ್ಚು ಪೋಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ವಿವಿಧ ಕೇಂದ್ರಗಳಲ್ಲಿ ಕೆಇಎಎಂ ಪ್ರವೇಶ ಪರೀಕ್ಷೆಗೆ ಹಾಜರಾದ ಐದು ವಿದ್ಯಾರ್ಥಿಗಳು ಮತ್ತು ಕೇಂದ್ರವೊಂದರ ಹೊರಗೆ ಕಾಯುತ್ತಿದ್ದ ಒಬ್ಬ ಪೋಷಕ ಕೊರನಾವೈರಸ್ ಸೋಂಕಿತರಾಗಿರುವುದು ಆತಂಕವನ್ನು ಸೃಷ್ಟಿಸಿದೆ.
ಇದನ್ನೂ ಓದಿ:ವೇಶ್ಯಾವಾಟಿಕೆಗೆ ಮಾರಲ್ಪಟ್ಟ ಅಪ್ರಾಪ್ತ ಬಾಲಕಿ ಹೇಗೆ ಪಾರಾದಳು ನೋಡಿ…
ರಾಜಧಾನಿಯ ವಿವಿಧ ಪರೀಕ್ಷಾ ಕೇಂದ್ರಗಳ ಹೊರಗೆ ಜಮಾಯಿಸಿದ ಪೋಷಕರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.ಮ್ಯೂಸಿಯಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕಾಟನ್ ಹಿಲ್ಸ್ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ 300 ಕ್ಕೂ ಹೆಚ್ಚು ಜನರು ಜಮಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೇಂಟ್ ಮೇರಿಸ್ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು.ಐದು ವಿದ್ಯಾರ್ಥಿಗಳ ಪೈಕಿ ಒಬ್ಬಾತ ತಿರುವನಂತಪುರದ ಕರಾವಳಿ ಹಾಟ್‌ಸ್ಪಾಟ್‌ನ ಪೂಂಥುರಾ ನಿವಾಸಿ, ಅಲ್ಲಿ ಸಮುದಾಯ ಹರಡುವಿಕೆ ಈಗಾಗಲೇ ದೃಢ ಪಟ್ಟಿದೆ.
ಇದನ್ನೂ ಓದಿ:ಯುಪಿಎಸ್​ಸಿ- ಸಿಎಂಎಸ್ 2020 ಪರೀಕ್ಷೆ : ಅಧಿಸೂಚನೆ ಪ್ರಕಟಣೆ ದಿನಾಂಕ ಮುಂದೂಡಿಕೆ
ಇಬ್ಬರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸೋಂಕು ದೃಢಪಟ್ಟ ವರದಿ ಬಂದಿದ್ದರೂ ಸಹ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆತಂಕಪಡುವ ವಾತಾವರಣವಿಲ್ಲ ಎಂದು ಹೇಳಿದ್ದಾರೆ. “ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸಲಾಗಿದೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜುಲೈ 21 ರಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಸೋಂಕು ದೃಢಪಟ್ಟ ವಿದ್ಯಾರ್ಥಿಯೊಂದಿಗೆ ವಲಿಯತುರಾದ ಸೇಂಟ್ ಆಂಟನಿ ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಮತ್ತು ಅವರ ಕುಟುಂಬವನ್ನು ಗುರುತಿಸಿ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ. ಇಡಿ ಕರಾವಳಿ ಪ್ರದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ.ಏತನ್ಮಧ್ಯೆ, ಜುಲೈ 21 ರಂದು ರಾಜ್ಯದ ಹಲವಾರು ವೈದ್ಯರು ಮತ್ತು ನರ್ಸ್​​ಗಳಿಗೆ ಸೋಂಕು ದೃಢಪಟ್ಟಿದೆ. ಕೋಳಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 16 ವೈದ್ಯರು, 17 ನರ್ಸಿಂಗ್ ಸಿಬ್ಬಂದಿ ಮತ್ತು ಇಬ್ಬರು ನರ್ಸಿಂಗ್ ಸಹಾಯಕರು ಕ್ವಾರಂಟೈನ್​​ನಲ್ಲಿದ್ದಾರೆ.
ಮಹಿಳೆ ಬೆಂಕಿಗಾಹುತಿ: ರಾಜಕೀಯ ವಿಷದ ಬೀಜಕ್ಕೆ ಬಲಿಯಾಯಿತೇ ಜೀವ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eleven =
Remember me
