ನವದೆಹಲಿ:ಕ್ರಿಪ್ಟೊಕರೆನ್ಸಿಗೆ ತಡೆ ಹೇರಲು ಸಾಧ್ಯವಿಲ್ಲ. ಆದರೆ ನಿಯಂತ್ರಿಸಬೇಕು. ಇದಕ್ಕಾಗಿ ನೀತಿ ಜಾರಿಗೊಳಿಸುವ ಬಗ್ಗೆ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ. ಕ್ರಿಪ್ಟೊಕರೆನ್ಸಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಪ್ರಬಲ ನೀತಿಯೊಂದನ್ನು ಜಾರಿಗೆ ತರಲು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಸಂಸದ ಜಯಂತ್ ಸಿನ್ಹಾ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ದೆಹಲಿಯಲ್ಲಿ ಸೋಮವಾರ ಸಭೆ ನಡೆಸಿತು. ಕ್ರಿಪ್ಟೊ ಎಕ್ಸ್​ಚೇಂಜ್​ಗಳು, ಬ್ಲಾ್ಯಕ್ ಚೈನ್ ಮತ್ತು ಕ್ರಿಪ್ಟೊ ಅಸೆಟ್ಸ್ ಕೌನ್ಸಿಲ್, ಉದ್ಯಮ ಸಂಸ್ಥೆಗಳು ಮತ್ತು ಇತರ ಪಾಲುದಾರ ಪ್ರತಿನಿಧಿಗಳೊಂದಿಗೆ ಸಂಸದೀಯ ಸಮಿತಿ ಮಾತುಕತೆ ನಡೆಸಿದೆ. ಈ ಸಂಸ್ಥೆಗಳ ಪ್ರತಿನಿಧಿಗಳು ಕ್ರಿಪ್ಟೊ ಕರೆನ್ಸಿ ಕುರಿತ ತಮ್ಮ ಅನಿಸಿಕೆಗಳನ್ನು ಸಮಿತಿಗೆ ಸಲ್ಲಿಸಿದ್ದಾರೆ. ಐಐಎಂ ಅಹಮದಾಬಾದ್​ನ ಶಿಕ್ಷಣ ತಜ್ಞರಿಂದ ಈ ವಿಷಯಕ್ಕೆ ಸಂಬಂಧಿಸಿ ಮಾಹಿತಿ ಸಂಗ್ರಹಿಸಲೂ ಸಮಿತಿ ಮುಂದಾಗಿದೆ. ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸುವ ಆರ್​ಬಿಐ ಸುತ್ತೋಲೆಯನ್ನು ಮಾರ್ಚ್ 2020ರ ಆರಂಭದಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಬಿಟ್​ಕಾಯಿನ್​ನಂತಹ ಕ್ರಿಪ್ಟೊ ಕರೆನ್ಸಿಗಳ ಪ್ರಸರಣಕ್ಕೆ ಪರ್ಯಾಯವಾಗಿ ಆರ್​ಬಿಐ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಹೊರತರಬೇಕು ಎಂಬ ಉದ್ದೇಶ ಹೊಂದಿದೆ.
ಬಿಟ್​ಕಾಯಿನ್ ಪ್ರಕರಣದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನೀವು (ಮಾಧ್ಯಮದವರು) ಅವರನ್ನು (ಕಾಂಗ್ರೆಸ್) ಪ್ರಶ್ನಿಸುವುದು ಬಿಟ್ಟು, ಪದೇಪದೆ ನನ್ನನ್ನೇ ಏಕೆ ಕೇಳುತ್ತಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಟ್ಟಾದರು. ತಿರುಪತಿ ಪ್ರವಾಸದಿಂದ ಸೋಮವಾರ ಹಿಂತಿರುಗಿದ ಬಳಿಕ ಆರ್​ಟಿ ನಗರ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಿದ್ದ ವೇಳೆ ಬಿಟ್​ಕಾಯಿನ್ ಪ್ರಕರಣ ಪ್ರಸ್ತಾಪವಾಯಿತು. ಏನನ್ನೂ ಹೇಳದೆ ಹೊರಟಿದ್ದ ಬೊಮ್ಮಾಯಿ ಹಿಂತಿರುಗಿ ಸಿಡಿಮಿಡಿಯಿಂದಲೇ ಉತ್ತರಿಸಿದರು. ಇಲ್ಲದ ವಿಚಾರವನ್ನು ಜೀವಂತವಾಗಿಡಲು ಅವರು ಪ್ರಯತ್ನಿಸುತ್ತಿದ್ದಾರೆ. ಹುರುಳಿಲ್ಲದ ಆರೋಪ ಹೊರಿಸಿ ರಾಜಕೀಯ ಮಾಡುತ್ತಿದ್ದಾರೆ. ಏನಾದರೂ ದಾಖಲೆಗಳಿದ್ದರೆ ಪೊಲೀಸರು ಅಥವಾ ಇಡಿಗೆ ಕೊಡಿ. ಅವರು ತನಿಖೆ ನಡೆಸುತ್ತಾರೆ. ಯಾರನ್ನೂ ರಕ್ಷಿಸುವುದಿಲ್ಲ ಎಂದು ಈಗಾಗಲೆ ಸ್ಪಷ್ಟವಾಗಿ ಹೇಳಿರುವೆ ಎಂದರು. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲದಿರು ವಾಗ ಕಥೆ ಹೆಣೆಯುವುದು ಎಲ್ಲಿಂದ ಬಂತು. ಅಂತಹ ಪ್ರಶ್ನೆಯೇ ಉದ್ಭವಿಸದು ಎಂದು ಬೊಮ್ಮಾಯಿ ಗರಂ ಆಗಿ ಹೇಳಿದರು.
ಕ್ರಿಪ್ಟೊ ಕರೆನ್ಸಿ ವ್ಯವಹಾರ ನಡೆಸುವ ತಜ್ಞರು, ಸಿಐಐ ಸದಸ್ಯರು ಮತ್ತು ಅಹಮದಾ ಬಾದ್​ನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್​ನ ಶಿಕ್ಷಣ ತಜ್ಞರು ಸೇರಿ ಹಲವು ಪಾಲದಾರರನ್ನು ಸಭೆಗೆ ಆಹ್ವಾನಿಸಿದ್ದೆವು. ಅವರು ಕ್ರಿಪ್ಟೊ ಫೈನಾನ್ಸ್ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ್ದಾರೆ. ಈ ಉದ್ಯಮ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಿಯಂತ್ರಣದ ಚೌಕಟ್ಟನ್ನು ರೂಪಿಸಬೇಕು.
|ಜಯಂತ್ ಸಿನ್ಹಾಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ
ಕಾಂಗ್ರೆಸ್​ನವರು ಇಬ್ಬರು ಪ್ರಭಾವಿಗಳು ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿ ದ್ದಾರೆ ಎನ್ನುತ್ತಿದ್ದಾರೆ. ಯಾರು ಆ ನಾಯಕರು ಎಂಬುದನ್ನು ಹೇಳಲಿ. ಸಿದ್ದರಾಮಯ್ಯ ಹಾವೇ ಇಲ್ಲದ ಬುಟ್ಟಿ ಇಟ್ಟುಕೊಂಡಿದ್ದಾರೆ. ಪ್ರತಿ ದಿನ ಹಾವು ಬಿಡುತ್ತೇನೆಂದು ಹೇಳಿ ನಗೆಪಾಟಲಿಗೆ ಈಡಾಗುವುದು ಬೇಡ. ಸುಳ್ಳು ಹೇಳಲು ಮಿತಿ ಇರಬೇಕು. 2018ರ ಹೊಡೆದಾಟದ ಪ್ರಕರಣವೊಂದರಲ್ಲಿ ನಲಪಾಡ್ ಬಂಧನವಾಗಿತ್ತು. ಆ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಆರೋಪಿಯಾದರೂ ಕಾಂಗ್ರೆಸ್ ಸರ್ಕಾರ ಅವನನ್ನು ಏಕೆ ಬಂಧಿಸಲಿಲ್ಲ?
|ಆರ್.ಅಶೋಕ್ಸಚಿವ
ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
