ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ರಾಜಕೀಯ ಪಿತೂರಿಯಾಗಿತ್ತು. ಅದನ್ನು ಅಲ್ಪಸಂಖ್ಯಾತರಲ್ಲಿ ಶಾಶ್ವತ ಭಯ ತುಂಬಲು ನಡೆಸಲಾಯಿತು.
ಅದೇ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮುಂದೆ ದೇಶದ ಮಾನವನ್ನು ಹಾನಿ ಮಾಡಲು ಹಿಂಸಾಚಾರವನ್ನು ಬಳಸಲಾಯಿತು ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿ ಹಿಂಸಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಆ ವರದಿ ಬಂದ ನಂತರ ಗಲಭೆಗೆ ಕಾರಣವಾದವರ ಮೇಲೆ ಕಠಿಂ ಕ್ರಮಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಇದು ರಾಜಕೀಯ ಪಿತೂರಿ ಎನ್ನುವುದು ನನ್ನ ವ್ಯಯಕ್ತಿಕ ಅಭಿಪ್ರಾಯ. ಇದರ ಮೇಲೆ ನಡೆಯುತ್ತಿರುವ ತನಿಖೆ ಪೂರ್ಣಗೊಂಡ ಮೇಲೆ ಸತ್ಯ ಬಯಲಿಗೆ ಬರಬೇಕಿದೆ ಎಂದರು.
ಅಲ್ಲಿದ್ದ ಆ್ಯಸಿಡ್​ ಬಾಂಬ್​ಗಳು ತಯಾರಿಸಿದ ರೀತಿ ನೋಡಿದರೆ ತಿಳಿಯುತ್ತದೆ. ಅಲ್ಲದೆ ಅವುಗಳನ್ನು ತಯಾರಿಸಲು ಆ್ಯಸಿಡ್​ ಕೊಂಡುಕೊಂಡಿದ್ದು ಚೆಕ್​ ಕೊಟ್ಟು ಎಂದು ತಿಳಿದು ಬಂದಿದೆ. ಆದರೆ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಕಾಯೋಣ ಎಂದರು.
‘ಸಬ್​ಕಾ ಸಾಥ್, ಸಬ್​ಕಾ ವಿಕಾಸ್ ಮತ್ತು ಸಬ್​ ಕಾ ವಿಶ್ವಾಸ’ ಎಂಬ ಘೋಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಅಲ್ಪಸಂಖ್ಯಾತ ಸಮುದಾಯದ ಒಬ್ಬ ಸದಸ್ಯರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಈ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಮತ್ತು ಅಲ್ಪಸಂಖ್ಯಾತರೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ವಾಸ್ತವವಾಗಿ ಸಿಎಎ ಅಥವಾ 370 ನೇ ವಿಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಏನೂ ಇಲ್ಲ ಎಂದು ಅವರು ಪುನರುಚ್ಚರಿಸಿದರು.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seven =
Remember me
