ನವದೆಹಲಿ:ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸಹಕರಿಸಿದರು ಎಂಬ ಕಾರಣಕ್ಕಾಗಿ ಚೀನಾದ ಆಡಳಿತಾಧಿಕಾರಿಗಳ ಆಣತಿಯನ್ನು ಅನುಸರಿಸುತ್ತಾ, ಸದ್ದಿಲ್ಲದೆ ತಮ್ಮದೇ ದೇಶದ ನೆಲವನ್ನು ಬಿಟ್ಟುಕೊಟ್ಟು ನೇಪಾಳವನ್ನೇ ಚೀನಾಕ್ಕೆ ಒತ್ತೆ ಇಡಲು ಮುಂದಾಗಿದ್ದ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ವಿರುದ್ಧ ಅವರ ಪಕ್ಷದವರೇ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಇದರಿಂದಾಗಿ ಅಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದ್ದು, ಭಾರತ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಕೆ.ಪಿ. ಓಲಿ ತಮ್ಮ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಬಗ್ಗೆ ಈ ಹಂತದಲ್ಲಿ ಏನೊಂದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೂ, ಅವರ ಪಕ್ಷದಲ್ಲಿರುವ ಅವರ ಕಟ್ಟಾ ವಿರೋಧಿ ಪಿ.ಕೆ. ದಹಾಲ್​ ಪ್ರಚಂಡಾ ಮಾತ್ರ ಕೆ.ಪಿ. ಓಲಿ ಅವರು ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳಿಂದ ನೇಪಾಳದ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತಿದೆ. ಇದರಿಂದ ನೇಪಾಳದ ಜನತೆಯಲ್ಲಿ ಅವರ ಬಗ್ಗೆ ಬೇಸರ ಮೂಡಿದೆ. ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವುದು ಒಳಿತು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆ.ಪಿ. ಓಲಿ ಅವರ ರಾಜೀನಾಮೆಗೆ ಎಲ್ಲೆಡೆಯಿಂದಲೂ ಒತ್ತಡ ಹೆಚ್ಚಾಗಲಾರಂಭಿಸಿದೆ. ನೇಪಾಳದ ಮಾಧ್ಯಮಗಳ ವರದಿಗಳ ಪ್ರಕಾರ ಈ ವಾರ ನಡೆದ ಕಮ್ಯುನಿಸ್ಟ್​ ಪಾರ್ಟಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಕೆ.ಪಿ. ಓಲಿ ಮತ್ತು ಪ್ರಚಂಡಾ ಇಬ್ಬರೂ ಸರ್ಕಾರದ ಆಡಳಿತ ವೈಖರಿಯ ಕುರಿತು ಪರಸ್ಪರ ದೂಷಿಸಿಕೊಂಡರು ಎನ್ನಲಾಗಿದೆ. ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳಲು ಕೆ.ಪಿ. ಓಲಿ ಅನುಸರಿಸಿದ ತಂತ್ರಗಾರಿಕೆಯ ಸೂಕ್ಷ್ಮ ವಿಚಾರಗಳನ್ನು ಪ್ರಚಂಡಾ ಸಭೆಯಲ್ಲಿ ಪ್ರಸ್ತಾಪಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ಕೋವಿಡ್​ ಸುರಕ್ಷತಾ ಕ್ರಮ ಅನುಷ್ಠಾನಗೊಳಿಸಿ, ಇಲ್ಲವೇ ದಾಳಿ ಇಡ್ತೀವಿ ನೋಡಿ…!
ಅಧಿಕಾರವನ್ನು ಉಳಿಸಿಕೊಳ್ಳಲು ಓಲಿ ಅವರು ಪಾಕಿಸ್ತಾನ, ಆಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದ ಮಾದರಿಯನ್ನು ಅವರು ಅನುಸರಿಸಿರುವ ಅನುಮಾನಗಳಿವೆ. ಆದರೆ, ಅಂಥ ಪ್ರಯತ್ನಗಳು ನೇಪಾಳದಲ್ಲಿ ನಡೆಯುವುದಿಲ್ಲ ಎಂದು ಪ್ರಚಂಡಾ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ಜೈಲಿಗೆ ರವಾನಿಸುವುದು ಸುಲಭದ ಮಾತಲ್ಲ. ಸೇನೆಯ ಸಹಾಯ ಪಡೆದು ದೇಶವನ್ನು ಆಳುವುದು ಕೂಡ ಅಷ್ಟೇ ಕಷ್ಟದ ಕೆಲಸ. ಇಲ್ಲವೇ ಪಕ್ಷವನ್ನು ಒಡೆದು, ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿ ಸರ್ಕಾರ ರಚಿಸುವುದು ಕೂಡ ಸುಲಿದ ಬಾಳೆಹಣ್ಣು ತಿಂದಷ್ಟು ಸುಲಭವಲ್ಲ ಎಂದು ಪ್ರಚಂಡಾ ಹೇಳಿದ್ದಾಗಿ ವರದಿಯಾಗಿದೆ.
ಹಾಗೆ ನೋಡಿದರೆ ಪ್ರಚಂಡಾ ಕೂಡ ಭಾರತದೊಂದಿಗೆ ಅಷ್ಟೇನೂ ಸ್ನೇಹಭಾವ ಹೊಂದಿಲ್ಲ. ಆದರೆ, ಕೆ.ಪಿ. ಓಲಿಯ ರೀತಿಯಲ್ಲಿ ಅವರೆಂದೂ ಭಾರತದ ಹಿತಾಸಕ್ತಿಗೆ ಧಕ್ಕೆ ಒದಗುವ ರೀತಿಯ ವರ್ತನೆಗಳನ್ನು ತೋರಿಲ್ಲ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ನೇಪಾಳದ ರಾಜಕೀಯ ಆಗುಹೋಗುಗಳ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎಂದು ಹೇಳಲಾಗಿದೆ.
ಲವರ್​ ಜತೆ ಸೇರಿ ಪತಿ ಕೊಂದ ಪತ್ನಿ: ದೃಶ್ಯಂ ಸಿನಿಮಾದಂತೆ ಮುಚ್ಚಿ ಹಾಕಲು ಯತ್ನಿಸಿ ಸಿಕ್ಕಿ ಬಿದ್ದಿದ್ಹೇಗೆ?​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twenty =
Remember me
