ತೆಲಂಗಾಣ:ರಾಜಕಾರಣಿಯೊಬ್ಬರ ಪುತ್ರ ಯುವತಿಯೊಬ್ಬಳನ್ನು ಅಪಹರಣ ಮಾಡಿದ್ದಲ್ಲದೆ, ಬಳಿಕ ಸ್ನೇಹಿತರ ಜತೆ ಸೇರಿ ಎರಡು ದಿನ ಗ್ಯಾಂಗ್ ರೇಪ್​ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ತೆಲಂಗಾಣದ ಸೂರ್ಯಪೇಟೆಯ ಕೊಡದ್​ ಎಂಬಲ್ಲಿ ಈ ಪ್ರಕರಣ ನಡೆದಿದೆ.
ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವತಿಯೊಬ್ಬಳು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಜಕಾರಣಿಯ ಪುತ್ರ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಪಕ್ಷದ ನಗರ ಸಭಾ ಸದಸ್ಯ ಟಿಆರ್​ಎಸ್​ನ ಮೊಹಮ್ಮದ್ ಖಾಜಾ ಎಂಬವರ ಪುತ್ರ ಶೇಖ್​ ಗೌಸ್​ ಪಾಷಾ ಮತ್ತು ಆತನ ಸ್ನೇಹಿತ ಸಾಯಿರಾಮ್​ ರೆಡ್ಡಿ ಬಂಧಿತ ಆರೋಪಿಗಳು.
ತಂಪುಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಕುಡಿಸಿ ತನ್ನನ್ನು ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಅಪಹರಿಸಿದ್ದ ಇವರು ಬಳಿಕ ಎರಡು ದಿನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಎಚ್ಚರ ಮರುಕಳಿಸಿದ ಬಳಿಕ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದು, ಮನೆಯವರಿಗೆ ತಿಳಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾಗಿ ಸಂತ್ರಸ್ತೆ ಸುದ್ದಿಗಾರರಿಗೆ ತಿಳಿಸಿದ್ದಾಳೆ.
ಡಿ.ಕೆ.ಶಿವಕುಮಾರ್​​ರನ್ನು ನಿಂದಿಸಿದ್ದ ವ್ಯಕ್ತಿಗೆ 2 ವರ್ಷ ಜೈಲುಶಿಕ್ಷೆ!

ಹಿರಿಯ ನಟ ದತ್ತಣ್ಣಗೆ ನಾಳೆ 80 ವರ್ಷ ಪೂರ್ಣ; ಇವರಿಗೆ ಒಂದಲ್ಲ ಮೂರು ಬರ್ತ್​ಡೇ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
