ನವದೆಹಲಿ:ಲಖೀಂಪುರ್​ ಖೇರಿ ಘಟನೆಯ ಆಧಾರದ ಮೇಲೆ ಕಾಂಗ್ರೆಸ್​ ನೇತೃತ್ವದ ವಿರೋಧ ಪಕ್ಷವನ್ನು ಪುನಶ್ಚೇತನ ಮಾಡಲು ಬಯಸುತ್ತಿರುವ ಜನರಿಗೆ ದೊಡ್ಡ ನಿರಾಶೆ ಕಾದಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್ ಹೇಳಿದ್ದಾರೆ. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಲಖೀಂಪುರ್​ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿದ ನಂತರ, ಕಿಶೋರ್​, ಈ ಮಾತು ಹೇಳಿದ್ದಾರೆ.​
ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಲು ಕಾಂಗ್ರೆಸ್​ ಮತ್ತು ಇತರ ವಿರೋಧ ಪಕ್ಷಗಳು ಪ್ರಯತ್ನ ನಡೆಸುತ್ತಲೇ ಇವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಲಖೀಂಪುರ್​ ದುರಂತವು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ಮಾತನಾಡಲು ಅವಕಾಶ ಮಾಡಿಕೊಟ್ಟಿದೆ. ಇದೇ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳನ್ನು ಚುನಾವಣಾ ದೃಷ್ಟಿಕೋನದಿಂದ ಅಳೆಯಬಲ್ಲ ಪ್ರಶಾಂತ್​ ಕಿಶೋರ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
People looking for a quick, spontaneous revival of GOP led opposition based on#LakhimpurKheriincident are setting themselves up for a big disappoinment.
Unfortunately there are no quick fix solutions to the deep-rooted problems and structural weakness of GOP.
— Prashant Kishor (@PrashantKishor)October 8, 2021

ತಮ್ಮ ಟ್ವೀಟ್​ನಲ್ಲಿ ಜಿಒಪಿ ಅರ್ಥಾತ್ ‘ಗ್ರ್ಯಾಂಡ್​ ಓಲ್ಡ್​ ಪಾರ್ಟಿ’ ಅಥವಾ ‘ಗವರ್ನಮೆಂಟ್​ ಆಫ್ ಪಂಜಾಬ್​’ ಎಂದು ಕಾಂಗ್ರೆಸ್​ನತ್ತ ಬೆಟ್ಟು ಮಾಡಿರುವ ಕಿಶೋರ್​, “ಲಖೀಂಪುರ್​ ಖೇರಿ ಘಟನೆಯ ಆಧಾರದ ಮೇಲೆ ಜಿಒಪಿ ನೇತೃತ್ವದ ವಿರೋಧದ ತ್ವರಿತ ಮತ್ತು ದಿಢೀರ್​ ಪುನರುಜ್ಜೀವನವನ್ನು ಹುಡುಕುತ್ತಿರುವ ಜನರು ದೊಡ್ಡ ನಿರಾಶೆಗೆ ಮೈಒಡ್ಡುತ್ತಿದ್ದಾರೆ. ದುರದೃಷ್ಟವಶಾತ್ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಮತ್ತು ಜಿಒಪಿಯ ರಚನಾತ್ಮಕ ದೌರ್ಬಲ್ಯಕ್ಕೆ ಯಾವುದೇ ತ್ವರಿತ ಪರಿಹಾರಗಳಿಲ್ಲ” ಎಂದು ಬರೆದಿದ್ದಾರೆ.(ಏಜೆನ್ಸೀಸ್)
ಶಾರುಖ್ ಪುತ್ರನ ಜಾಮೀನು ಅರ್ಜಿ ವಜಾ; ನ್ಯಾಯಾಲಯದಲ್ಲಿ ನಡೆದದ್ದೇನು?

‘ಐಟಿ ದಾಳಿ… ಇವತ್ತು ಇವರ ಮೇಲೆ ನಾಳೆ ಅವರ ಮೇಲೆ’ ಎಂದ ಶ್ರೀರಾಮುಲು

ಮೇಡ್​ ಇನ್​ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 6 =
Remember me
