ನವದೆಹಲಿ: ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ 13,750 ಮತಗಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 8ರಿಂದ ಮತದಾನ ಆರಂಭವಾಗಿದೆ. ಹಲವು ಅಭ್ಯರ್ಥಿಗಳು ಮಂದಿರಗಳಿಗೆ ಭೇಟಿ ದೇವರ ದರ್ಶನ ಪಡೆದು ಮತಗಟ್ಟೆಗಳತ್ತ ತೆರಳಿದ್ದಾರೆ. ಮತದಾರರು ಉತ್ಸಾಹದಿಂದ ಬೆಳಗ್ಗೆ 7 ಗಂಟೆಗೇ ಮತಗಟ್ಟೆ ಸಮೀಪ ಸರದಿ ನಿಂತಿರುವ ದೃಶ್ಯ ಕಂಡುಬಂದಿದೆ.
ಚುನಾವಣಾ ಆಯೋಗದ ವರದಿ ಪ್ರಕಾರ, ದೆಹಲಿಯಲ್ಲಿ ಒಟ್ಟು 1,46,92,136 ಮತದಾರರಿದ್ದಾರೆ. ಇದರಲ್ಲಿ 80.55 ಲಕ್ಷ ಪುರುಷರು ಹಾಗೂ 66.35 ಲಕ್ಷ ಮಹಿಳಾ ಮತದಾರರಿದ್ದಾರೆ. ಚುನಾವಣೆಗಾಗಿ ಸುಮಾರು 90 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಒಂದು ಮತಗಟ್ಟೆಯನ್ನು ಅಂಗಾಂಗ ವೈಫಲ್ಯವಿರುವವರೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ.
380 ಮತಗಟ್ಟೆಗಳಲ್ಲಿ ಮಹಿಳೆಯರೇ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದ್ದು, ಭದ್ರತೆಗೂ ಕೂಡ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರನ್ನು ಆಕರ್ಷಿಸುವ ಸಲುವಾಗಿ ಪ್ರತಿ ಕ್ಷೇತ್ರಗಳಲ್ಲಿ ಒಂದು ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಇಲ್ಲಿ ಸಾಮಾನ್ಯ ಬೂತ್​ಗಳಿಗಿಂತ ವೈದ್ಯಕೀಯ ಕಿಟ್, ಗಾಲಿಕುರ್ಚಿಗಳು, ರ‍್ಯಾಂಪ್ ಸೌಲಭ್ಯಗಳನ್ನು ಒದಗಿಸಲಾಗಿದೆ. (ಏಜೆನ್ಸೀಸ್ )
Polling for 70 Assembly constituencies in Delhi begins.#DelhiElections2020pic.twitter.com/VKzJhRjNoz
— ANI (@ANI)February 8, 2020

Delhi: Bharatiya Janata Party leader Ram Madhav arrives at a polling station in Jhandewalan area, in Karol Bagh assembly constituency. AAP has fielded its sitting MLA Vishesh Ravi from here. BJP's Yogendra Chandolia & Congress' Gaurav Dhanak are contesting from here.pic.twitter.com/MVQ7fzE7rt
— ANI (@ANI)February 8, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eight =
Remember me
