ನವದೆಹಲಿ:ವಾಯು ಮಾಲಿನ್ಯದಿಂದಾಗಿ ಶೇ. 40ರಷ್ಟು ಭಾರತೀಯರ ಆಯಸ್ಸು ಒಂಬತ್ತು ವರ್ಷ ಕಡಿತಗೊಳ್ಳುವ ಸಂಭವವಿದೆ. ಅಮೆರಿಕದ ಅಧ್ಯಯನ ತಂಡವೊಂದು ಈ ಕಳವಳಕಾರಿ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ರಾಜಧಾನಿ ನವದೆಹಲಿ ಸಹಿತ ಕೇಂದ್ರ, ಪೂರ್ವ ಹಾಗೂ ಈಶಾನ್ಯ ಭಾರತದ ವಿಶಾಲ ಭಾಗಗಳಲ್ಲಿ ಮಾಲಿನ್ಯ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಷಿಕಾಗೊ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ (ಇಪಿಐಸಿ-ಎಪಿಕ್) ತಿಳಿಸಿದೆ.
ಪರಿಸರ ಮಾಲಿನ್ಯ ಭಾರತದ ಹೆಚ್ಚು ಭಾಗಗಳಿಗೆ ವಿಸ್ತರಿಸಿದೆ. ಮಾಲಿನ್ಯದ ಮಟ್ಟವೂ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಅಪಾಯಕಾರಿ ಮಾಲಿನ್ಯ ಮಟ್ಟ ನಿಯಂತ್ರಿಸಲು 2019ರಲ್ಲಿ ಆರಂಭಿಸಿರುವ ಭಾರತದ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮವನ್ನು (ಎನ್​ಸಿಎಪಿ) ಎಪಿಕ್ ಶ್ಲಾಘಿಸಿದೆ. ಅತಿ ಹೆಚ್ಚು ಮಾಲಿನ್ಯ ಸಮಸ್ಯೆಯಿರುವ 102 ನಗರಗಳಲ್ಲಿ 2024ರ ಹೊತ್ತಿಗೆ ಮಾಲಿನ್ಯವನ್ನು ಶೇಕಡ 20ರಿಂದ 30ರಷ್ಟು ಇಳಿಸುವುದು ಎನ್​ಸಿಎಪಿ ಗುರಿಯಾಗಿದೆ. ಕೈಗಾರಿಕೆ ಹಾಗೂ ವಾಹನಗಳ ಹೊಗೆ ಸೂಸುವಿಕೆಯನ್ನು ಕಡಿತಗೊಳಿಸುವ ಮೂಲಕ ಇದನ್ನು ಖಾತರಿಪಡಿಸಲಾಗುತ್ತದೆ.
ನವದೆಹಲಿ 2020ರಲ್ಲಿ ಸತತ ಮೂರನೇ ವರ್ಷವೂ ಜಗತ್ತಿನ ಅತ್ಯಂತ ಹೆಚ್ಚು ಮಲಿನ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಶ್ವಾಸಕೋಶಕ್ಕೆ ಹಾನಿ ಮಾಡುವ ಗಾಳಿಯಿಂದ ಹರಡುವ ಪಿಎಂ2.5 ಎಂಬ ಕಣಗಳ ಸಾಂದ್ರತೆಯ ಮಟ್ಟದ ಆಧಾರದಲ್ಲಿ ಗಾಳಿಯ ಗುಣಮಟ್ಟವನ್ನು ಸ್ವಿಸ್ ಸಂಸ್ಥೆ ಐಕ್ಯೂಏರ್ ಅಳೆಯುತ್ತದೆ. ಕಳೆದ ವರ್ಷ ಲಾಕ್​ಡೌನ್ ಹೇರಿಕೆಯಿಂದಾಗಿ ನವದೆಹಲಿಯ 2 ಕೋಟಿ ನಿವಾಸಿಗಳು ಬೇಸಿಗೆಯಲ್ಲಿ ಶುದ್ಧ ಗಾಳಿ ಸೇವಿಸುವ ಭಾಗ್ಯ ಪಡೆದಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 18 =
Remember me
