ಮುಂಬೈ:ಪೂನಂ ಪಾಂಡೆ ಸಾವಿನ ಸುದ್ದಿಯ ಬಗ್ಗೆ ನಿಗೂಢತೆ ಹೆಚ್ಚಾಗಿದೆ. ಸತ್ಯ ಏನೆಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಆದರೆ ಯಾವ ಮಾಹಿತಿಯೂ ಹೊರಬರುತ್ತಿಲ್ಲ. ಇದೀಗ ಫ್ಯಾಷನ್ ಮತ್ತು ಸಿನಿಮಾ ವಿಮರ್ಶಕ ಉಮೈರ್ ಸಂಧು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಪೂನಂ ಪಾಂಡೆ ಜೀವಂತವಾಗಿದ್ದಾರೆ. ಇದು ಕೇವಲ ಪ್ರಚಾರದ ಸ್ಟಂಟ್ ಎಂದು ಅವರು ಹೇಳುತ್ತಿದ್ದಾರೆ.
Just called#PoonamPandeyCousin now, And she is Alive & enjoying her death news. She did Publicity Stunt !!!
— Umair Sandhu (@UmairSandu)February 2, 2024

X ನಲ್ಲಿ ಪೋಸ್ಟ್ ಮಾಡಿದ ಉಮೈರ್ ಸಂಧುಉಮೈರ್ ಸಂಧು ಈ ವಿಚಾರವನ್ನು X ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡುವಾಗ, “ನಾನು ಪೂನಂ ಅವರ ಸೋದರಸಂಬಂಧಿಯೊಂದಿಗೆ ಮಾತನಾಡಿದ್ದೇನೆ. ಅವರು ಜೀವಂತವಾಗಿದ್ದಾರೆ. ಸಾವಿನ ಸುದ್ದಿಯನ್ನು ಆನಂದಿಸುತ್ತಿದ್ದಾರೆ ಎಂದು ಉಮೈರ್ ಬರೆದಿದ್ದಾರೆ. ಇದು ಪೂನಂ ಅವರ ಪಬ್ಲಿಸಿಟಿ ಸ್ಟಂಟ್” ಎಂದು ಬರೆದುಕೊಂಡಿದ್ದಾರೆ.
ಉಮೈರ್‌ನ ಈ ಪೋಸ್ಟ್ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಅವಂತಾರ ಸೃಷ್ಟಿಯಾಗಿದೆ. ಏನಾಗುತ್ತಿದೆ ಎಂದು ಎಲ್ಲರೂ ಗೊಂದಲದಲ್ಲಿದ್ದಾರೆ?, ಆದರೆ, ನಿನ್ನೆ ಉಮೈರ್ ಪೋಸ್ಟ್​​​​​ನಲ್ಲಿ ಪೂನಂ ಅವರ ಫೋಟೋಗಳನ್ನು ಶೇರ್ ಮಾಡಿ, “ರೆಸ್ಟ್ ಇನ್ ಪೀಸ್, ಪೂನಂ ಪಾಂಡೆ…ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಬರೆದುಕೊಂಡಿದ್ದರು.
ಬಳಕೆದಾರರು ಹೇಳಿದ್ದೇನು?ಉಮೈರ್ ಅವರ ಈ ಪೋಸ್ಟ್‌ಗೆ ನೆಟ್ಟಿಗರು ಸಹ ಪ್ರತಿಕ್ರಿಯೆಗಳ ಮೇಲೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ಇದು ಅತ್ಯಂತ ಅಗ್ಗದ ಪ್ರಚಾರದ ಸ್ಟಂಟ್”, “ಪೂನಂ ನಿಧನರಾಗಿದ್ದಾರೆ ಮತ್ತು ಇದು ನಿಜ”, “ಆಕೆಯ ದೇಹ ಕಾನ್ಪುರದಲ್ಲಿದೆ, ನೀವು ನಂಬುತ್ತೀರಾ”?, “ಅವಳು ಏನು ಸಾಧಿಸಲು ಬಯಸುತ್ತಾಳೆ ಎಂದು ಬರೆದಿದ್ದಾರೆ?” “ಸಾಯದಿದ್ದರೆ ಆಕೆಯನ್ನು ಬಂಧಿಸಬೇಕು” ಎಂದು ಬಳಕೆದಾರರು ಈಗ ಈ ಪೋಸ್ಟ್‌ನಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ನಿಜವಾದ ಸತ್ಯ ಏನು?ನಿನ್ನೆ ಬೆಳಗ್ಗೆ ಪೂನಂ ಪಾಂಡೆ ನಿಧನದ ಸುದ್ದಿ ಬಂದಿದೆ. ಪೂನಂ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಪೂನಂ ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಕಾರಣ ಎಂದು ಉಲ್ಲೇಖಿಸಲಾಗಿದೆ. ಈಗ ಈ ವಿಚಾರದಲ್ಲಿ ಬೇರೆ ಬೇರೆ ವಿಷಯಗಳು ಬೆಳಕಿಗೆ ಬರುತ್ತಿವೆ. ಪ್ರತಿಯೊಬ್ಬರೂ ಸತ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ, ಆದರೆ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವು ಇನ್ನೂ ಹೊರಬಂದಿಲ್ಲ.
ಕೊನೆಯ ಬಾರಿ ಪೂನಂ ನೋಡಲು ಹೋದ ಅಭಿಮಾನಿಗಳಿಗೂ ಶಾಕ್…ಮೃತದೇಹ ಸಿಗದೇ ಎಲ್ಲರಿಗೂ ಅಚ್ಚರಿ, ನಿಗೂಢವಾಗಿ ಉಳಿದ ನಟಿ ಸಾವು


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 10 =
Remember me
