ಮುಂಬೈ:ನಿನ್ನೆಯಷ್ಟೇ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಸಾವಿನ ಸುದ್ದಿಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಆದರೆ ಮರುದಿನ ಅಂದರೆ ಇಂದು ಶನಿವಾರದಂದು ಸ್ವತಃ ಪೂನಂ ಪಾಂಡೆ ಇನ್ಸ್ಟಾಗ್ರಾಮ್​​​​​​​ನಲ್ಲಿ ವಿಡಿಯೋ ಹಂಚಿಕೊಂಡು, ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ. ಸ್ವತಃ ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಸುಳ್ಳು ಸುದ್ದಿ ಹಬ್ಬಿಸಿದ ಪೂನಂ ಪಾಂಡೆ ವಿರುದ್ಧ ಕಾನೂನು ಕ್ರಮ ಜರುಗಿಸಬಹುದೇ?
ವಾಸ್ತವವಾಗಿ, ಸುಳ್ಳು ಸುದ್ದಿಗಳನ್ನು ಹರಡಿದ ಪೂನಂಗೆ ಜೈಲು ಶಿಕ್ಷೆಯಾಗಬಹುದು. ಇದರೊಂದಿಗೆ ದಂಡವನ್ನೂ ವಿಧಿಸಬಹುದು. ಐಟಿ ಕಾಯಿದೆ 2000 ಸೆಕ್ಷನ್ 67 ರ ಅಡಿಯಲ್ಲಿ, ಯಾರಾದರೂ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹರಡಿದ ತಪ್ಪಿತಸ್ಥರಾಗಿದ್ದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅಲ್ಲದೆ 5 ಲಕ್ಷದವರೆಗೆ ದಂಡ ತೆರಬೇಕಾಗಬಹುದು. ಅದೇ ಅಪರಾಧ ಪುನರಾವರ್ತನೆಯಾದರೆ, ಅಪರಾಧಿಗೆ 5 ವರ್ಷ ಜೈಲು ಮತ್ತು 10 ಲಕ್ಷದವರೆಗೆ ದಂಡ ತೆರಬೇಕಾಗಬಹುದು.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವಾಗ, ಪೂನಂ ಪಾಂಡೆ, “ಹಲೋ ನಾನು ಪೂನಂ. ನನ್ನನ್ನು ಕ್ಷಮಿಸಿ, ನಾನು ನೋಯಿಸಿದವರಿಗೆ ಕ್ಷಮೆಯಾಚಿಸುತ್ತೇನೆ. ಎಲ್ಲರನ್ನೂ ಅಚ್ಚರಿಗೊಳಿಸುವುದು ನನ್ನ ಉದ್ದೇಶವಾಗಿತ್ತು, ಏಕೆಂದರೆ ನಾವು ಹೆಚ್ಚು ಮಾತನಾಡದ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಚರ್ಚಿಸಲು ನಾನು ಬಯಸುತ್ತೇನೆ. ಹೌದು, ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದೇನೆ. ಇದ್ದಕ್ಕಿದ್ದಂತೆ ನಾವೆಲ್ಲರೂ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ. ಇದು ನಿಮ್ಮ ಜೀವನವನ್ನು ಮೌನವಾಗಿ ಕಸಿದುಕೊಳ್ಳುವ ರೋಗ. ಈ ರೋಗದ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆಯಿದೆ. ನನ್ನ ಸಾವಿನ ಸುದ್ದಿಯಿಂದಾಗಿ ಎಲ್ಲರಿಗೂ ಈ ಕಾಯಿಲೆಯ ಬಗ್ಗೆ ತಿಳಿಯಲಾರಂಭಿಸಿದ್ದಾರೆ ಎಂದು ನಾನು ಹೆಮ್ಮೆಪಡುತ್ತೇನೆ” ಎಂದು ತಿಳಿಸಿದ್ದಾರೆ.
ಸಂತಾಪ ಸೂಚಿಸಿದ ಬಾಲಿವುಡ್ ಸೆಲೆಬ್ರಿಟಿಗಳುಪೂನಂ ಸಾವಿನ ಸುದ್ದಿಗೆ ಕಂಗನಾ ರನೌತ್, ಮುನಾವರ್ ಫರುಕಿ, ಡೈಸಿ ಶಾ ಮತ್ತು ಪೂಜಾ ಭಟ್ ಸೇರಿದಂತೆ ಅನೇಕ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ. ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ಸಂತಾಪ ವ್ಯಕ್ತಪಡಿಸಿ, ಪೂನಂ ಪಾಂಡೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದು ಅತೀವ ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕ್ಯಾನ್ಸರ್‌ನಿಂದ ಯುವತಿಯನ್ನು ಕಳೆದುಕೊಂಡಿರುವುದು ದುರಂತ ಎಂದು ಪೋಸ್ಟ್ ಮಾಡಿದ್ದರು. ನಟಿ ಸಂಭಾವನಾ ಸೇಠ್ ಕೂಡ ಪೂನಂ ಪಾಂಡೆ ತನ್ನ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಎಂದಿಗೂ ಹೇಳಲಿಲ್ಲ ಎಂದು ಹೇಳಿದ್ದರು. ಖತ್ರೋನ್ ಕೆ ಖಿಲಾಡಿ ಎಂಬ ರಿಯಾಲಿಟಿ ಶೋನಲ್ಲಿ ಪೂನಂ ಜೊತೆ ಸಂಭಾವನಾ ಭಾಗವಹಿಸಿದ್ದಾರೆ.
ಕಂಗನಾರಿಂದ ಮುನಾವರ್ ಫಾರೂಕಿವರೆಗೆ…ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಪೂನಂ ಎಲ್ಲರನ್ನೂ ಫೂಲ್ ಮಾಡಿದ್ದು ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
