ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 341 ಕಿಲೋಮೀಟರ್ ಉದ್ದದ ಪೂರ್ವಾಂಚಲ ಎಕ್ಸ್​ಪ್ರೆಸ್​ವೇಯನ್ನು ಮಂಗಳವಾರ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ಅವರು ಆಗಮಿಸಿದ ಭಾರತೀಯ ವಾಯುಪಡೆಯ ಬೃಹತ್ ಸಿ-130ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನ ಇದೇ ಎಕ್ಸ್​ಪ್ರೆಸ್​ವೇನಲ್ಲಿ ಇಳಿದು ಗಮನಸೆಳೆಯಿತು. ಎಕ್ಸ್​ಪ್ರೆಸ್​ವೇನಲ್ಲಿರುವ 3.2 ಕಿ.ಮೀ. ಏರ್​ಸ್ಟ್ರಿಪ್​ನಲ್ಲಿ ಭಾರತೀಯ ವಾಯುಪಡೆಯ ವಿವಿಧ ಯುದ್ಧವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್​ಗಳ ಕವಾಯತನ್ನು ಕೂಡ ಪ್ರಧಾನಿ ವೀಕ್ಷಿಸಿದರು. ತುರ್ತು ಸಂದರ್ಭಗಳಲ್ಲಿ ಯುದ್ಧವಿಮಾನಗಳನ್ನು ಇಳಿಸುವುದಕ್ಕೆ ಬೇಕಾದ ರೀತಿಯಲ್ಲಿ ಎಕ್ಸ್​ಪ್ರೆಸ್​ವೇಯನ್ನು ನಿರ್ವಿುಸಲಾಗಿದೆ.

ಎಕ್ಸ್​ಪ್ರೆಸ್​ವೇಗಳ ಜಾಲ:ಪೂರ್ವಾಂಚಲ ಎಕ್ಸ್​ಪ್ರೆಸ್​ವೇಗೆ ಹೊರತಾಗಿ ಉತ್ತರಪ್ರದೇಶದಲ್ಲಿ ಎಕ್ಸ್​ಪ್ರೆಸ್​ವೇಗಳ ಜಾಲ ನಿರ್ವಣವಾಗುತ್ತಿದೆ. ಕನಿಷ್ಠ ಮೂರು ಎಕ್ಸ್ ಪ್ರೆಸ್​ವೇಗಳ ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ, ರಕ್ಷಣಾ ಕಾರಿಡಾರ್ ಪ್ರಸ್ತಾವನೆ ಚಾಲ್ತಿಯಲ್ಲಿದೆ. ಆಗ್ರಾ-ಲಖನೌ ಮತ್ತು ಯಮುನಾ ಎಕ್ಸ್​ಪ್ರೆಸ್​ವೇಗಳು ಈಗಾಗಲೇ ಚಾಲ್ತಿಯಲ್ಲಿದ್ದು, ವಿವಿಧ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಉತ್ತರ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳನ್ನು ಜೋಡಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಶೀಘ್ರವೇ ಗಂಗಾ ಎಕ್ಸ್​ಪ್ರೆಸ್​ವೇ ಶುರುವಾಗಲಿದೆ. ಗೋರಖಪುರ ಮತ್ತು ಬಲಿಯಾ ಲಿಂಕ್ ಎಕ್ಸ್​ಪ್ರೆಸ್​ವೇ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ. ಪ್ರಧಾನಿ ಮೋದಿಯವರ ಮುನ್ನೋಟದಂತೆ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಬೆಳೆಸುವಲ್ಲಿ ಉತ್ತರ ಪ್ರದೇಶ ಬೆನ್ನೆಲುಬಾಗಿ ನಿಲ್ಲಲಿದೆ.
|ಯೋಗಿ ಆದಿತ್ಯನಾಥಉತ್ತರ ಪ್ರದೇಶ ಮುಖ್ಯಮಂತ್ರಿ
ಲೆಕ್ಕಪರಿಶೋಧನೆ ಎಂಬುದು ಇಂದು ಮೌಲ್ಯವರ್ಧನೆಯ ಒಂದು ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಸಿಎಜಿ ವರ್ಸಸ್ ಸರ್ಕಾರ ಎಂಬ ಮನಸ್ಥಿತಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು. ಅವರು ದೇಶದ ಚೊಚ್ಚಲ ‘ಆಡಿಟ್ ದಿವಸ್’(ಲೆಕ್ಕಪರಿಶೋಧನೆ ದಿನ) ಕಾರ್ಯಕ್ರಮ ಮತ್ತು ಸರ್ದಾರ್ ಪಟೇಲ್ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು. ಹಿಂದಿನ ಸರ್ಕಾರಗಳ ಸತ್ಯವನ್ನು ನಾವು ಪ್ರಾಮಾಣಿಕವಾಗಿ ದೇಶದ ಜನರ ಮುಂದೆ ಇರಿಸಿದ್ದೇವೆ. ಸಮಸ್ಯೆಗಳನ್ನು ಗುರುತಿಸಿದಾಗ ಮಾತ್ರವೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಸಂಪರ್ಕರಹಿತ ಕಸ್ಟಮ್್ಸ, ಆಟೋಮ್ಯಾಟಿಕ್ ರಿನೀವಲ್ಸ್, ಫೇಸ್​ಲೆಸ್ ಅಸೆಸ್​ವೆುಂಟ್ಸ್, ಸೇವಾ ಪೂರೈಕೆಗೆ ಆನ್​ಲೈನ್ ಅರ್ಜಿ ಸಲ್ಲಿಕೆ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲ ಸುಧಾರಣಾ ಕ್ರಮಗಳ ಕಾರಣ ಸರ್ಕಾರದ ಅನಪೇಕ್ಷಿತ ಹಸ್ತಕ್ಷೇಪಗಳು ಕೊನೆಯಾಗಿವೆ ಎಂದರು. ಸಿಎಜಿ ಗಿರೀಶ್​ಚಂದ್ರ ಮುಮು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಯುವರತ್ನ’ ಪುನೀತ್ ರಾಜ್​ಕುಮಾರ್‌ಗೆ ರಾಷ್ಟ್ರಮಟ್ಟದ ‘ಸಿದ್ದಶ್ರೀ’ ಪ್ರಶಸ್ತಿ ಘೋಷಣೆ…

ಭೀಕರ ರಸ್ತೆ ಅಪಘಾತ, ನಟ ಸುಶಾಂತ್​ ಸಿಂಗ್​ ರಜಪೂತ್​ ಕುಟುಂಬದ ಐವರ ದಾರುಣ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
