ಭಾರತ:ಕ್ರಿಕೆಟ್​ ವೀಕ್ಷಣೆ ಮಾಡುವ ಅನೇಕರಿಗೆ ಸುಧೀರ್​ ಕುಮಾರ್​ ಚೌಧರಿ ಯಾರು ಎಂಬುದು ತಿಳಿದಿರುತ್ತದೆ. ಭಾರತ ತಂಡ ಯಾವುದೇ ಪಂದ್ಯವನ್ನು, ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅಲ್ಲಿಗೆ ತೆರಳಿ ಟೀಂ ಇಂಡಿಯಾಗೆ ಅಭೂತಪೂರ್ವ ಬೆಂಬಲ ಕೊಡುವುದು ಸುಧೀರ್​ ಅವರ ಹವ್ಯಾಸವಾಗಿದೆ.  ವಿಶೇಷವಾಗಿ ಭಾರತದ ತ್ರಿವರ್ಣ ಧ್ವಜದ ಬಣ್ಣವನ್ನು ತಮ್ಮ ದೇಹಕ್ಕೆ ಲೇಪಿಸಿಕೊಂಡು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ:ಇಸ್ರೇಲ್​-ಹಮಾಸ್​ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್​ ನಟಿ, ಸಿಗದ ಸಂಪರ್ಕ ಹೆಚ್ಚಿದ ಆತಂಕ
ಸಚಿನ್​ ತೆಂಡೂಲ್ಕರ್​ ಅವರ ವಿಶೇಷ ಅಭಿಮಾನಿಯಾದ ಸುಧೀರ್​, 2011ರ ಕ್ರಿಕೆಟ್​ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭಾರೀ ಪ್ರೋತ್ಸಾಹ ನೀಡಿದ್ದರು. ಅದರಂತೆಯೇ ಈ ಬಾರಿ ನಡೆಯುತ್ತಿರುವ 2023ರ ವಿಶ್ವಕಪ್​ನ ಭಾರತದ ಪಂದ್ಯಗಳಿಗೂ ಹಾಜರಾಗಲಿದ್ದಾರೆ. ವಿಶ್ವಕಪ್​ ಟ್ರೋಫಿ ತಮ್ಮ ತಲೆ ಮೇಲಿರುವ ಕಾರಣವನ್ನು ಇದೀಗ ಸುಧೀರ್​ ಸುದ್ದಿಗಾರರ ಮುಂದೆ ಹಂಚಿಕೊಂಡಿದ್ದಾರೆ.
VIDEO | "This 'trophy' is my life. I wore it on my head in 2011, and we won the World Cup. Now, after 12 years, I am wearing it again. I hope India wins the World Cup 2023, and we get to keep the 'trophy'," says Sudhir Kumar Chaudhary, a popular Indian cricket fan.pic.twitter.com/jIi2gOXUU2
— Press Trust of India (@PTI_News)October 7, 2023

“ಈ ‘ಟ್ರೋಫಿ’ ನನ್ನ ಜೀವನ. ನಾನು ಇದನ್ನು 2011 ರಲ್ಲಿ ನನ್ನ ತಲೆಯ ಮೇಲೆ ಧರಿಸಿದ್ದೆ, ಆಗ ನಾವು ವಿಶ್ವಕಪ್ ಗೆದ್ದಿದ್ದೇವೆ. ಈಗ 12 ವರ್ಷಗಳ ನಂತರ, ಮತ್ತೆ ಧರಿಸಿದ್ದೇನೆ. ಭಾರತವು 2023ರ ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಖಂಡಿತವಾಗಿ ಟ್ರೋಫಿ ಪಡೆಯುತ್ತೇವೆ” ಎಂದು ಸುಧೀರ್ ಹೇಳಿದರು,(ಏಜೆನ್ಸೀಸ್).
ಯೂಟ್ಯೂಬರ್ ಟಿಟಿಎಫ್ ವಾಸನ್ ಡ್ರೈವಿಂಗ್​ ಲೈಸನ್ಸ್​​ ರದ್ದು!; ಎಷ್ಟು ವರ್ಷಗಳ ಕಾಲ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + ten =
Remember me
