ಹೈದರಾಬಾದ್​:ಪ್ರಖ್ಯಾತ ತೆಲುಗು ಟಿವಿ ಆ್ಯಂಕರ್​ ಕಾತಿ ಕಾರ್ತಿಕಾ ವಿರುದ್ಧ ವಂಚನೆ ಪ್ರಕರಣವೊಂದು ದಾಖಲಾಗಿದೆ. ಅಂದಹಾಗೆ ಕಾರ್ತಿಕಾ, ತೆಲಂಗಾಣದ ಮಾಜಿ ಸಚಿವ ಮತ್ತು ಪ್ರಸ್ತುತ ಡೆಪ್ಯುಟಿ ಸ್ಪೀಕರ್​ ಆಗಿರುವ ಟಿ. ಪದ್ಮ ರಾವ್ ಅವರ ಮೊಮ್ಮಗಳು​.
ಬಿಲ್ಡರ್​ ಒಬ್ಬರಿಗೆ 1 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಕಾರ್ತಿಕಾ ಮತ್ತು ಆಕೆಯ ಸಹಚರರ ವಿರುದ್ಧ ಹೈದರಾಬಾದಿನ ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಮತ್ತು ಆಕ್ಷೇಪಣಾ ರಹಿತ ಪ್ರಮಾಣಪತ್ರ (NoCs) ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದಳು ಎಂಬ ಆರೋಪ ಕಾರ್ತಿಕಾ ಮೇಲಿದೆ.
ತೆಲಂಗಾಣದ ಡುಬ್ಬಕ್​ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಕಾರ್ತಿಕಾ ಕಣಕ್ಕಿಳಿದಿದ್ದು, ಇದರ ಬೆನ್ನಲ್ಲೇ ಆಕೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅಂದಹಾಗೆ ಕಾರ್ತಿಕಾ ಬಿಗ್​ಬಾಸ್​ ಮೂಲಕ ತೆಲಂಗಾಣದಲ್ಲಿ ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಹೇಶ್​ ಬಾಬು ಚಿತ್ರಕ್ಕೆ ನಾಯಕಿ ಫಿಕ್ಸ್; ಕೀರ್ತಿ ಸುರೇಶ್​ಗೆ ಜನ್ಮದಿನವೇ ಸಿಕ್ತು ಸರ್ಪ್ರೈಸ್​
ಟಚ್​ಸ್ಟೋನ್​ ಪ್ರಾಪರ್ಟಿ ಡೆವಲಪರ್ಸ್​ನ ಮ್ಯಾನೇಜಿಂಗ್​ ಡೈರೆಕ್ಟರ್​ ದೊರೆಸ್ವಾಮಿ ಎಂಬುವರು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ ದೊರೆಸ್ವಾಮಿ ಅವರು ಕಾರ್ತಿಕಾ ಹಾಗೂ ಆಕೆಯ ಸಹಚರರ ಒಡೆತನದ ಕಾರ್ತಿಕಾ ಬಿಆರ್​ಎಂ ಸಂಸ್ಥೆಗೆ ಒಂದು ಕೋಟಿ ರೂ. ಡೆಪಾಸಿಟ್​ ಮಾಡಿದ್ದರಂತೆ0. ಮೇದಕ್​ ಜಿಲ್ಲೆಯ ಅಮೀನ್​ಪುರದಲ್ಲಿರುವ 52 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.
52 ಎಕರೆ ಜಾಗದಲ್ಲಿ ಹೌಸಿಂಗ್​ ಪ್ರಾಜೆಕ್ಟ್​ ಮಾಡಲು ದೊರೆಸ್ವಾಮಿ ಯೋಜನೆ ರೂಪಿಸಿದ್ದರಂತೆ. ಯಾವುದೇ ತೊಡಕಾಗದಂತೆ ತೆಲಂಗಾಣ ಸರ್ಕಾರದಿಂದ ಆಕ್ಷೇಪಣಾ ರಹಿತ ಪ್ರಮಾಣಪತ್ರ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾಳೆಂದು ಆರೋಪಿಸಲಾಗಿದೆ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ನರೇಗಾ ಕೂಲಿ ಪಡ್ಕೊಂಡ್ರು ‘ದೀಪಿಕಾ ಪಡುಕೋಣೆ’, ‘ಜಾಕ್ವೆಲಿನ್ ಫೆರ್ನಾಂಡೆಸ್’ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 5 =
Remember me
