ನವದೆಹಲಿ:ಭಾರತದ ಜನಸಂಖ್ಯೆ 2036ರ ಹೊತ್ತಿಗೆ 152.2 ಕೋಟಿ ತಲುಪಲಿದ್ದು, ಲಿಂಗಾನುಪಾತದಲ್ಲಿಯೂ ಸುಧಾರಣೆ ಕಾಣಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈಗಾಗಲೇ ಭಾರತ, ಜನಸಂಖ್ಯೆಯಲ್ಲಿ ನೆರೆಯ ಚೀನಾವನ್ನು ಮೀರಿಸಿದ್ದು, ವಿಶ್ವದ ಅತಿದೊಡ್ಡ ಜನಸಂಖ್ಯಾ ದೇಶವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಇನ್ನು ಹಲವು ವರ್ಷಗಳ ಕಾಲ ಈ ಪಟ್ಟವನ್ನು ಉಳಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ.
ವ್ಯುಮೆನ್​ ಅಂಡ್​ ಮೆನ್​ ಇನ್​ ಇಂಡಿಯಾ 2023ರ ವರದಿಯ ಪ್ರಕಾರ ಭಾರತ ಜನಸಂಖ್ಯೆ 2036ನೇ ವರ್ಷಕ್ಕೆ 152.2 ಕೋಟಿ ತಲುಪಲಿದೆ. ಇದರಲ್ಲಿ ಪುರುಷರ ಪ್ರಮಾಣ ಶೇ. 48.5ಕ್ಕೆ ಹೋಲಿಕೆ ಮಾಡಿದರೆ ಮಹಿಳೆಯರ ಪ್ರಮಾಣ ಶೇ. 48.8ಕ್ಕೆ ಹೆಚ್ಚಾಗಲಿದೆ. ಈ ಅಂಕಿ-ಅಂಶ ಗಮನಿಸಿದರೆ ಲಿಂಗಾನುಪಾತದಲ್ಲಿ ಮಹತ್ವದ ಸುಧಾರಣೆ ಕಾಣಲಿದೆ.
ಈ ವರದಿಯ ಪ್ರಕಾರ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಪ್ರಮಾಣವು 2011 ರಿಂದ 2036 ರವರೆಗೆ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಫಲವತ್ತತೆಯ ದರಗಳು ಕುಂಠಿತವಾಗುತ್ತಿರುವುದು. ಇದಕ್ಕೆ ತದ್ವಿರುದ್ಧವಾಗಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ ಈ ಸಮಯದಲ್ಲಿ ಹೆಚ್ಚಾಗಲಿದೆ.
2011ಕ್ಕೆ ಹೋಲಿಕೆ ಮಾಡಿದರೆ 2036ರ ಹೊತ್ತಿಗೆ ದೇಶದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಲಿದೆ. 2011ರಲ್ಲಿ 1000 ಪುರುಷರಿಗೆ 943 ಮಹಿಳೆಯರಿದ್ದರು. ಆದರೆ, 20236ರ ಹೊತ್ತಿಗೆ 954ಕ್ಕೆ ಏರಿಕೆಯಾಗಲಿದ್ದು, ಇದು ಲಿಂಗಾನುಪಾತದಲ್ಲಿ ಗಣನೀಯ ಬದಲಾವಣೆ ಹಾಗೂ ಲಿಂಗ ಸಮಾನತೆಯ ಪಾಸಿಟಿವ್​ ಟ್ರೆಂಡ್​ ಅನ್ನು ಸೂಚಿಸುತ್ತದೆ.
ಅಂದಹಾಗೆ ಈ ವರದಿಯು ಭಾರತದಲ್ಲಿನ ಮಹಿಳೆಯರು ಮತ್ತು ಪುರುಷರ ಪರಿಸ್ಥಿತಿಯ ಸಮಗ್ರ ನೋಟವನ್ನು ನೀಡುತ್ತದೆ. ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಆರ್ಥಿಕ ಭಾಗವಹಿಸುವಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಡೇಟಾವನ್ನು ಈ ವರದಿ ಒದಗಿಸುತ್ತದೆ. ಇದು ನಗರ-ಗ್ರಾಮೀಣ ವಿಭಾಗಗಳು ಮತ್ತು ಪ್ರದೇಶಗಳಾದ್ಯಂತ ಲಿಂಗ-ವಿಂಗಡಣೆಯ ಡೇಟಾವನ್ನು ಪ್ರಸ್ತುತಪಡಿಸುತ್ತದೆ ಮತ್ತು ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ. ಈ ವರದಿಯ ಪ್ರಮುಖ ಸೂಚಕಗಳನ್ನು ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಪ್ರಕಟಿತ ಡೇಟಾದಿಂದ ಪಡೆಯಲಾಗಿದೆ.(ಏಜೆನ್ಸೀಸ್​)
ರೋಹಿತ್ ಶರ್ಮ​ ಇನ್ನೂ 2 ವರ್ಷ ಆಡಬಹುದು ಆದ್ರೆ ವಿರಾಟ್​ ಕೊಹ್ಲಿ… ಹರ್ಭಜನ್​ ಸಿಂಗ್​ ಅಚ್ಚರಿ ಹೇಳಿಕೆ!

1000 ಅಡಿ ಆಳದ ಕೊಳವೆ ಬಾವಿಗೆ ಕ್ಯಾಮೆರಾ ಬಿಟ್ಟ ಯುವಕನಿಗೆ ಕಂಡಿದ್ದು ಎದೆ ಝಲ್ ಎನಿಸುವ ದೃಶ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 10 =
Remember me
